ಆಪರೇಶನ್ ಸಿಂಧೂರ್ ಬಳಿಕ ಪಾಕಿಸ್ತಾನದಿಂದ 15 ಲಕ್ಷ ಸೈಬರ್ ದಾಳಿಯನ್ನು ವಿಫಲಗೊಳಿಸಿದ ಭಾರತ

ಮುಂಬೈ: ಪಾಕಿಸ್ತಾನದ ಮೇಲೆ ಭಾರತೀಯ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಪಾಕಿಸ್ತಾನದ ಹ್ಯಾಕರ್‌ಗಳು ಭಾರತವನ್ನು ಗುರಿಯಾಗಿರಿಸಿ 15 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿ ನಡೆಸಿದ್ದಾರೆ. ಆದರೆ ಅದರಲ್ಲಿ 150 ದಾಳಿಗಳು ಮಾತ್ರವೇ ಯಶಸ್ವಿಯಾ ಗಿದೆಯೆಂದು ಮಹಾರಾಷ್ಟ್ರದ ರಾಜ್ಯ ಸೈಬರ್ ಅಪರಾಧ ವಿಭಾಗ ತಿಳಿಸಿದೆ.

ಭಾರತದ ಸೇನೆ, ಆಡಳಿತ ಸರಕಾರ ಸೇರಿ ಇನ್ನಿತರ ವೆಬ್‌ಸೈಟ್‌ಗಳನ್ನು ಪ್ರಧಾನವಾಗಿ ಗುರಿಯಾಗಿರಿಸಿಕೊಂಡು ಈ 15 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿ ನಡೆಸಲಾಗಿದೆ.  ಪಾಕಿಸ್ತಾನ ಮಾತ್ರವಲ್ಲ ಬಾಂಗ್ಲಾದೇಶ, ಇಂಡೋನೇಶ್ಯಾ, ಮೊರಾಕ್ಕೋ ಮತ್ತು ಮಧ್ಯಪ್ರಾಚ್ಯ ದೇಶಗಳಿಂದಲೂ ಇಂತಹ ದಾಳಿ ನಡೆಸಲಾಗಿದೆ.  ಅದರಲ್ಲಿ 150 ದಾಳಿಗಳು ಮಾತ್ರವೇ ಯಶಸ್ಸು ಕಂಡಿವೆಯೆಂದು ಮಹಾರಾಷ್ಟ್ರ ಸೈಬರ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯಶಸ್ವಿ ಯಾದವ್ ತಿಳಿಸಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page