ಇತಿಹಾಸ ಬದಲಾವಣೆಯಲ್ಲಿ ಸ್ತ್ರೀಯರಿಗೆ ಮಹತ್ತರ ಪಾತ್ರ- ಬಿಜೆಪಿ

ಮಂಜೇಶ್ವರ :ಇತಿಹಾಸದ ಪುಟಗಳನ್ನು ಅವಲೋಕಿಸಿದಾಗ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಪ್ರಾಮುಖ್ಯತೆ ಪಡೆದಿದೆ. ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ ಎಲ್. ಹೇಳಿದರು. ಹೊ ಸಂಗಡಿ ಪ್ರೇರಣಾದಲ್ಲಿ ಜರಗಿದ ಬಿಜೆಪಿ ಮಂಜೇಶ್ವರ ಮಂಡಲ ಮಹಿಳಾ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿ ದರು. ಮಂಡಲ ಕಾರ್ಯದರ್ಶಿ ಜಯಶ್ರೀ ಕಮಲಾಕ್ಷ ಮಾಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಮಾತನಾಡಿ ದರು. ಕೇಂದ್ರ ಜಾರಿಗೆ ತರುವ ಮಹಿಳಾ ಬಿಲ್ ದೇಶದ ಮಹಿಳಾ ಸಮಾಜಕ್ಕೆ ಸಿಕ್ಕ ಗೌರವ ಎಂದು ಅವರು ಹೇಳಿದರು. ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಮೋದಿ ಆಡಳಿತದಲ್ಲಿ ಸ್ತ್ರಿ ಸಮು ದಾಯಕ್ಕೆ ಸಿಕ್ಕಿರುವ ಸವಲತ್ತುಗಳ ಬಗ್ಗೆ ತಿಳಿಸಿದರು. ಕುಸುಮ ಟೀಚರ್, ಕೃಷಿಕೆ ಮಾಯಶ್ರೀ ಬಾಯರುರನ್ನು ಗೌರವಿಸಲಾಯಿತು. ಮುಖಂ ಡರಾದ ಮಣಿಕಂಠ ರೈ, ಜಯಲP್ಷ್ಮ ಭಟ್, ವಿನಯ ಭಾಸ್ಕರ, ಆಶಾಲತಾ ಪೆಲಪಾಡಿ, ಮಮತಾ ವರ್ಕಾಡಿ, ಗೀತಾ ಭಾಸ್ಕರ್, ಆಶಾ, ಶಶಿಕಲಾ ಮಾಡ ಮಹಿಳಾ ಜನಪ್ರತಿ ನಿದಿsಗಳು, ಉಪಸ್ಥಿತರಿದ್ದರು. ತುಳಸಿ ವಿ ಸ್ವಾಗತಿಸಿ, ಯತೀರಾಜ್ ವಂದಿಸಿದರು.

You cannot copy contents of this page