ಬಿಜೆಪಿಯದ್ದು ಕಪಟ ಹಿಂದುತ್ವ -ಶಾಸಕ ಪ್ರದೀಪ್ ಈಶ್ವರ್

ಪೈವಳಿಕೆ: ಸಮಾಜದಲ್ಲಿ ಸ್ಪರ್ಧೆ ಸೃಷ್ಟಿಸಿ ಧರ್ಮಗಳ ಮಧ್ಯೆ ಹೊಡೆದಾಡಿಸಿ ಬಿಜೆಪಿ ರಾಜಕೀಯ ಲಾಭ ಉಂಟು ಮಾಡುವ ಪಕ್ಷವಾಗಿದೆಯೆಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನುಡಿದರು. ಕೊರೋನ ಸಮಯದಲ್ಲಿ ಗಡಿಯಲ್ಲಿ ಕೇರಳದವರಿಗೆ ದ್ರೋಹ ಬಗೆದವರಾಗಿದ್ದಾರೆ ಬಿಜೆಪಿಯವರೆಂದು ಅವರು ಆಪಾದಿಸಿದರು. ಆರಿಕ್ಕಾಡಿ ಟೋಲ್ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೆ. ಸುರೇಂದ್ರನ್ ಎಲ್ಲಿದ್ದರೆಂದು ಅವರು ಪ್ರಶ್ನಿಸಿದರು. ಐಕ್ಯರಂಗದ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್‌ರ ಚುನಾವಣಾ ಪ್ರಚಾರ ಸಭೆ ಪೈವಳಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಸಂತ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಝೆಡ್ ಎ ಕಯ್ಯಾರ್ ಸ್ವಾಗತಿಸಿದರು. ಅಭ್ಯರ್ಥಿ ಎಕೆಎಂ ಅಶ್ರಫ್, ಯುಡಿಎಫ್ ಮಂಡಲ ಅಧ್ಯಕ್ಷ ಮಂಜುನಾಥ ಆಳ್ವ, ಸಂಚಾಲಕ ಅಸೀಸ್ ಮರಿಕ್ಕೆ, ಹರ್ಷಾದ್ ವರ್ಕಾಡಿ, ಹರೀಶ್ ನಂಬ್ಯಾರ್ ಸಹಿತ ಹಲವರು ಮಾತನಾಡಿದರು.

RELATED NEWS

You cannot copy contents of this page