ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಒಂದು ವರ್ಷದೊಳಗೆ ೨೫ ಮಂದಿ ಇಲಿ ವಿಷ ಸೇವಿಸಿ ಮೃತಪಟ್ಟ ಬಗ್ಗೆ ತಿಳಿದುಬಂದಿದೆ. ಜಿಲ್ಲೆಯ ಸುಪರ್ ಮಾರ್ಕೆಟ್‌ಗಳಲ್ಲಿ, ಗ್ರೋಸರಿ ಅಂಗಡಿಗಳಲ್ಲೂ, ಇತರ ಸಣ್ಣ ಅಂಗಡಿ ಗಳಲ್ಲೂ ಇಲಿ ವಿಷ ಸುಲಭವಾಗಿ ಲಭಿಸುವ ಕಾರಣ ಸಣ್ಣ ಸಮಸ್ಯೆ ಗಳಿಗೂ ಇಲಿ ವಿಷದಂತ ಹವುಗಳನ್ನು ಖರೀದಿಸಿ ಸೇವಿಸಿ ಆತ್ಮಹತ್ಯೆ ನಡೆಸಲು ಕಾgಣವಾಗತ್ತಿದೆ. ಈ ರೀತಿಯ ವಿಷಗಳನ್ನು ಮಾರಾಟ ಮಾಡುವ ವೇಳ ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ.
