ಮುಂಬೈ: ಮುಂಬೈಯಲ್ಲಿರುವ ಇಸ್ಕಾನ್ ದೇವಾಲಯಕ್ಕೆ ಇ ಮೈಲ್ ಮೂಲಕ ಬಾಂಬ್ ಬೆದರಿಕೆಯೊಡ್ಡಲಾಗಿದೆ. 16 ತಾಸುಗಳೊಳಗಾಗಿ ಆರ್‌ಡಿಎಕ್ಸ್ ತುಂಬಿದ 5 ಐಇಡಿ ಬಾಂಬ್‌ಗಳು ಸ್ಫೋಟಗೊಳ್ಳಲಿದೆಯೆಂದು ಅಪರಿಚಿತ ಐಡಿ ಮೂಲಕ ಕಳುಹಿ ಸಲಾದ ಇಮೈಲ್ ಸಂದೇಶದಲ್ಲಿ ತಿಳಿಸಲಾಗಿದೆ. ತಕ್ಷಣ ಪೊಲೀಸರ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ವ್ಯಾಪಕ ಶೋಧ ಆರಂಭಿಸಿದೆ.