ಇಸ್ರೇಲ್ ವಿರುದ್ಧ ಕದನ ವಿರಾಮ ಘೋಷಿಸಿದ ಇರಾನ್

ನವದೆಹಲಿ: ಇಸ್ರೇಲ್ ವಿರುದ್ಧ ಇರಾನ್ ಕದನ ವಿರಾಮ ಘೋಷಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್-ಇಸ್ರೇಲ್ ನಡುವೆ ಯುದ್ಧ ವಿರಾಮ ಘೋಷಿಸಿದ ಬೆನ್ನಲ್ಲೇ ಅದಕ್ಕೆ ಪೂರಕವಾಗಿ ಇರಾನ್ ಕೂಡಾ ಕದನ ವಿರಾಮ ಘೋಷಿಸಿದೆಯೆಂದು ಇರಾನ್  ಮಾಧ್ಯಮಗಳು ವರದಿಮಾಡಿವೆ.

೧೨ ದಿನಗಳ ಯುದ್ಧ ಮುಗಿದಿದ್ದು, ಇರಾನ್ ಮತ್ತು ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆಯೆಂದು ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ.

ತನ್ನ ಪರಮಾಣು ತಾಣಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಮತ್ತು ಅಸ್ತಿರ ಪ್ರದೇಶದಲ್ಲಿ  ಉದ್ವಿಗ್ನತೆಯನ್ನು ಹೆಚ್ಚಿಸಿದ್ದಕ್ಕಾಗಿ ಇರಾನ್ ನಿನ್ನೆ ಖತರ್ ಮತ್ತು ಇರಾಕ್‌ನಲ್ಲಿರುವ  ಅಮೆರಿಕದ ಸೇನಾ ನೆಲೆಗಳ ಮೇಲೆ  ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷರು ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಘೋಷಿಸಿದ್ದಾರೆ. ಆದರೆ ಅಮೆರಿಕಾ ಅಧ್ಯಕ್ಷ ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಇಸ್ರೇಲ್‌ನ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ವಾಯು ಸೇನೆ ಇಸ್ರೇಲ್‌ನ  ಬರ್ ಸೇವಾ ಪ್ರದೇಶದಲ್ಲಿ ಇರಾನ್ ಈ ದಾಳಿ ನಡೆಸಿದ್ದು ಅದರಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಹಲವು ಕಟ್ಟಡಗಳಿಗೂ ಹಾನಿ ಉಂಟಾಗಿದೆಯೆಂದು ವರದಿಗಳು ಸೂಚಿಸುತ್ತಿವೆ.

You cannot copy contents of this page