ಇಸ್ರೇಲ್-ಹಮಾಸ್ ಯುದ್ಧ ಹಿನ್ನೆಲೆ: ದಿಲ್ಲಿಯಲ್ಲಿ ಆರಾಧನಾಲಯಗಳಿಗೆ ಬಿಗಿ ಭದ್ರತೆ
ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಅತೀ ಭೀಕರವಾದ ರೀತಿಯಲ್ಲಿ ಮುಂದುವರಿ ಯುತ್ತಿರು ವಂತೆಯೇ ಒಂದೆಡೆ ಇಸ್ರೇಲ್‌ನ್ನು ಬೆಂಬಲಿಸಿ ಮತ್ತು ಇನ್ನೊಂದೆಡೆ ಪ್ಯಾಲಸ್ತೀನ್‌ಗೆ ಬೆಂಬಲ ನೀಡಿ ಭಾರತದ ವಿವಿಧೆಡೆಗಳಲ್ಲಿ ಮೆರವಣಿಗೆ ನಡೆಯುತ್ತಿರುವಂತೆಯೇ ದಿಲ್ಲಿಯಲ್ಲಿ ಆರಾಧನಾಲಯಗಳಿಗೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಇದರಲ್ಲಿ ದೇವಸ್ಥಾನಗಳಿಗೆ ಇನ್ನಷ್ಟು ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪ್ರತಿಭಟನೆ ಹೆಸರಲ್ಲಿ ಕೆಲವು ಮತೀಯ ಮೂಲಭೂತವಾದಿ ಶಕ್ತಿಗಳು ಆರಾಧನಾಲಯಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಮಾಹಿತಿ ನೀಡಿದ್ದು, ಆ ಹಿನ್ನೆಲೆಯಲ್ಲಿ ಆರಾಧನಾಲಯಗಳಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಆರಾಧನಾಲಯಗಳಿಗೆ ಮಾತ್ರವಲ್ಲ ದಿಲ್ಲಿಯಾದ್ಯಂತ ಇತರ ಎಲ್ಲೆಡೆಗಳಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇಸ್ರೇಲ್-ಹಮಾಸ್ ಯುದ್ಧದ ಹೆಸರಲ್ಲಿ ನಡೆಸಲಾಗುತ್ತಿರುವ ಮೆರವಣಿಗೆಯಲ್ಲಿ ಭಯೋತ್ಪಾದಕರು ನುಸುಳಿ ಅದರ ಹೆಸರಲ್ಲಿ ದಾಳಿ ನಡೆಸುವ ಹುನ್ನಾರ ನಡೆಸುತ್ತಿದ್ದಾರೆಂಬ ಮಾಹಿತಿ ಗುಪ್ತಚರ ವಿಭಾಗಕ್ಕೆ ಲಭಿಸಿದೆ. ಇದುವೇ ದಿಲ್ಲಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಿರುವುದರ ಪ್ರಧಾನ ಹಿನ್ನೆಲೆಯಲಾಗಿದೆ.