ಉಗ್ರ ಹಫೀಸ್‌ನನ್ನು ನಮಗೆ ಒಪ್ಪಿಸಿ-ಭಾರತ
ನವದೆಹಲಿ: ಭಾರತದ ವಿರುದ್ಧ ಭಯೋತ್ಪಾದನೆಗೆ ಸದಾ ನೇತೃತ್ವ ನೀಡುತ್ತಿರುವ ಹಾಗೂ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ಹಾಗೂ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಂಡ್ ಭಯೋತ್ಪಾದಕರಾದ ಪಾಕಿಸ್ತಾನದ ಹಫೀಸ್ ಸಯ್ಯಿದ್, ಸಾಜಿದ್ ಮಿರ್ ಮತ್ತು ಝಕೀರ್ ರಹಮಾನ್ ಕಖ್ವಿಯನ್ನು ನಮಗೆ ಹಸ್ತಾಂತರಿಸುವಂತೆ ಭಾರತದ ರಾಯಭಾರಿ ಕೆ.ಪಿ. ಸಿಂಗ್ ಪಾಕಿಸ್ತಾನದೊಡನೆ ಒತ್ತಾಯಿಸಿದ್ದಾರೆ. ಈ ಉಗ್ರರನ್ನು ಭಾರತಕ್ಕೆ ಒಪ್ಪಿಸಿದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲು ಸಾಧ್ಯವೆಂದು ಅವರು ಹೇಳಿದ್ದಾರೆ.