ಉತ್ತರಾಖಂಡ್‌ನಲ್ಲಿ ಬಸ್ ನೀರಿಗೆ ಬಿದ್ದು ಹಲವರು ನಾಪತ್ತೆ

ರುದ್ರಪ್ರಯಾಗ್: ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಘೋಲ್ತಿರ್‌ನಲ್ಲಿ ಇಂದು ಬೆಳಿಗ್ಗೆ ಉಕ್ಕಿ ಹರಿಯುತ್ತಿದ್ದ ಅಲಕಾನಂದ ನದಿಗೆ ಬಸ್ಸೊಂದು ಮಗುಚಿ ಬಿದ್ದು ಅದರಲ್ಲಿದ್ದ ಹಲವರು ನಾಪತ್ತೆಯಾಗಿದ್ದಾರೆ. ಬಸ್‌ನಲ್ಲಿ ಎಷ್ಟು ಮಂದಿ ಇದ್ದರೆಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಭದ್ರತಾ ಸಂಸ್ಥೆಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ಸನ್ನು ಮೇಲಕ್ಕೆತ್ತುವ ಯತ್ನದಲ್ಲಿತೊಡಗಿದ್ದಾರೆ. ಮಾತ್ರವಲ್ಲ ನಾಪತ್ತೆಯಾದವರನ್ನು ಪತ್ತೆಹಚ್ಚುವ ಕೆಲಸವೂ ಭರದಿಂದ ಮುಂದುವರಿಯುತ್ತಿದೆ.

You cannot copy contents of this page