ಉಪಚುನಾವಣೆ ಪುದುಪಳ್ಳಿ ನಾಳೆ ಮತಗಟ್ಟೆಯತ್ತ
ಕೋಟ್ಟಯಂ: ಕೋಟ್ಟಯಂ ಜಿಲ್ಲೆಯ ಪುದುಪ್ಪಳ್ಳಿ ವಿಧಾನಸಭೆಗೆ ನಾಳೆ ಉಪಚುನಾವಣೆ ನಡೆಯಲಿದೆ. ನಾಳೆ ಬೆಳಿಗ್ಗೆ ೭ರಿಂದ ಸಂಜೆ ೬ ಗಂಟೆ ತನಕ ಮತದಾನ ನಡೆಯಲಿದೆ. ಚುನಾವಣೆ ಸಾಮಗ್ರಿಗಳ ವಿತgಣೆ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಬಹಿರಂಗ ಪ್ರಚಾರ ನಿನ್ನೆ ಸಂಜೆ ಕೊನೆಗೊಂಡಿದೆ.
ಯುಡಿಎಫ್ ಉಮೇದ್ವಾರ ರಾಗಿ ಕಾಂಗ್ರೆಸ್ನ ಚಾಂಡಿ ಉಮ್ಮ ನ್, ಎಡರಂಗದ ಉಮೇದ್ವಾರರಾಗಿ ಸಿಪಿಎಂನ ಜೈಕ್ ಥೋಮಸ್ ಮತ್ತು ಎನ್ಡಿಎ ಉಮೇದ್ವಾರರಾಗಿ ಬಿಜೆಪಿಯ ಜಿ. ಲಿಜಿನ್ಲಾಲ್ ಸ್ಪರ್ಧಾಕಣದಲ್ಲಿದ್ದಾರೆ. ಇನ್ನು ಆಮ್ ಆದ್ಮಿ ಪಾರ್ಟಿ ಉಮೇದ್ವಾರರಾಗಿ ಲೂಕ್ ಥೋಮಸ್ ಸೇರಿದಂತೆ ಇತರ ನಾಲ್ಕು ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಪುದುಪಳ್ಳಿ ವಿಧಾನಸಭಾ ಕ್ಷೇತ್ರ ಒಟ್ಟು ಎಂಟು ಗ್ರಾಮ ಪಂಚಾ ಯತ್ಗಳಿವೆ. ಅವುಗಳಲ್ಲಾಗಿ ಒಟ್ಟು ೧,೭೬,೪೧೭ ಮತದಾರರಿದ್ದಾರೆ. ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಮುಖ್ಯ ಮಂತ್ರಿ ಉಮ್ಮನ್ ಚಾಂಡಿಯವರ ನಿಧನದ ಹಿನ್ನೆಲೆಯಲ್ಲಿ ಪುದುಪಳ್ಳಿ ವಿಧಾನಸಭೆಗೆ ಉಪಚುನಾವಣೆ ನಡೆಸಲಾಗುತ್ತಿದೆ.
ಇದರ ಹೊರತಾಗಿ ಯುಪಿ, ತ್ರಿಪುರ ಮತ್ತು ಝಾರ್ಖಂಡ್ ರಾಜ್ಯಗಳ ಇತರ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೂ ನಾಳೆ ಉಪಚುನಾವಣೆ ನಡೆಯಲಿದೆ.