ಹೊಸದಿಲ್ಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿಯಾ ಒಕ್ಕೂ ಟದಿಂದ ಮತ ಸೋರಿಕೆ ಯಾಗಿದೆ ಯೆಂದು ಕಾಂಗ್ರೆಸ್ ಆರೋಪಿಸಿದೆ. ಮಹಾರಾಷ್ಟ್ರ ಸಹಿತ ವಿವಿಧೆಡೆ ಮತ ಸೋರಿಕೆ ಯಾಗಿದೆ. ಕೆಲವು ಸಣ್ಣ ಪಕ್ಷ ಗಳನ್ನು ಸರಕಾರ ಸ್ವಾಧೀನಿಸಿದೆ ಯೆಂದೂ ಕಾಂಗ್ರೆಸ್ ಆರೋಪಿ ಸಿದೆ. ಕೆಲವು ಸಂಸದರು ಬ್ಯಾಲೆಟ್ ಪೇಪರ್ ಉದ್ದೇಶಪೂರ್ವಕ ಅಸಿಂಧುಗೊಳಿಸಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಕೆಲವು ಸಂಸದರು ಪಕ್ಷದ ನಿರ್ದೇಶವನ್ನು ಉಲ್ಲಂಘಿಸಿದ್ದಾರೆAದು ಕಾಂಗ್ರೆಸ್ ತಿಳಿಸುತ್ತಿದೆ. ಸುಪ್ರೀಂಕೋರ್ಟ್ನ ನಿವೃತ್ತ ಜಸ್ಟೀಸ್ ಬಿ. ಸುದರ್ಶನ್ ರೆಡ್ಡಿ ಅವರನ್ನು ಇಂಡಿಯಾ ಒಕ್ಕೂಟ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಅವರಿಗೆ 300 ಮತಗಳು ಮಾತ್ರ ವೇ ಲಭಿಸಿದೆ. 15 ಮತಗಳು ಅಸಿಂಧುಗೊAಡಿವೆ. 152 ಮತಗಳ ಬಹುಮತದೊಂದಿಗೆ ಎನ್ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದಾರೆ. ಚಲಾಯಿಸಲ್ಪಟ್ಟ 767 ಮತಗಳ ಪೈಕಿ 452 ಮತಗಳು ಸಿ.ಪಿ. ರಾಧಾಕೃಷ್ಣನ್ರಿಗೆ ಲಭಿಸಿದೆ.
