ಊಟಮಾಡಿ ಕುಳಿತಿದ್ದ ವ್ಯಕ್ತಿ ಸಿಡಿಲು ಬಡಿದು ಮೃತ್ಯು

ಮುಳ್ಳೇರಿಯ: ಊಟ ಮಾಡಿ  ಮನೆಯೊಳಗೆ ಕುಳಿತಿದ್ದ ವ್ಯಕ್ತಿ ಸಿಡಿಲು ಬಡಿದು   ಮೃತಪಟ್ಟ ದಾರುಣ ಘಟನೆ  ಸಂಭವಿಸಿದೆ. ನೆಟ್ಟಣಿಗೆ ಸಬ್ರಕಜೆಯ ದೇವರಗುತ್ತು   ಗಂಗಾಧರ ರೈ (78) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ವೇಳೆ ಘಟನೆ ಸಂಭವಿಸಿದೆ. ಗಂಗಾಧರ ರೈಯವರು ಊಟಮಾಡಿ ಕುರ್ಚಿಯಲ್ಲಿ ಕುಳಿತಿದ್ದ ವೇಳೆ   ಭಾರೀ  ಸಿಡಿಲಿನ ಆಘಾತ ಉಂಟಾಗಿತ್ತು. ತಕ್ಷಣ ಅವರು ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರ ಸಹಾಯದಿಂದ ಮುಳ್ಳೇರಿಯದ ಆಸ್ಪತ್ರೆಗೆ ಕೊಂಡೊಯ್ದಿದ್ದು, ಆದರೆ  ಅಷ್ಟರೊಳಗೆ ನಿಧನ ಸಂಭವಿಸಿತ್ತು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತು.

ಮೃತರು ಪತ್ನಿ ಬೇಬಿ, ಮಕ್ಕಳಾದ ಶ್ರೀನಿವಾಸ ರೈ, ಸುಜಯ, ಸುಪ್ರಿಯ, ಸೊಸೆ ಸುಗುಣ, ಅಳಿಯಂದಿರಾದ ಗಿರಿಶಂಕರ, ಮೋಹನ ಶೆಟ್ಟಿ, ಸಹೋದರ-ಸಹೋದರಿಯರಾದ ಜಗನ್ನಾಥ ರೈ, ಶಶಿಕಲಾ,ಸುಮತಿ, ಪುಷ್ಪಲತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಸಿಡಿಲಿನ ಆಘಾತದಿಂದ ಮನೆಯ  ಬಲ್ಬುಗಳು, ಫ್ಯೂಸ್ ಸಹಿತ ವಿದ್ಯುತ್ ಉಪಕರಣ ಗಳು ಉರಿದು ನಾಶಗೊಂಡಿವೆ.

You cannot copy contents of this page