ಎಂಡಿಎಂಎ ಸಹಿತ ಬೇಳ ನಿವಾಸಿ ಸೆರೆ

ಕಾಸರಗೋಡು: ಮಾರಕ ಮಾದಕವಸ್ತು ವಾದ ಎಂಡಿಎಂಎ ಸಹಿತ ಯುವಕನನ್ನು ಬಂಧಿಸಲಾಗಿದೆ. ಬೇಳ ಕುಂಜಾರು ಹೌಸ್‌ನ ಕೆ.ಎ. ಇಬ್ರಾಹಿಂ ಇಷ್ಫಾಕ್ (27) ಎಂಬಾತ ನನ್ನು ಕಾಸರಗೋಡು ನಗರ ಠಾಣೆ ಎಸ್‌ಐ ಕೆ. ರಾಜೀವನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಇಬ್ರಾಹಿಂ ಇಷ್ಫಾಕ್‌ನ ಕೈಯಿಂದ 1.17 ಗ್ರಾಂ ಎಂಡಿಎಂಎ ವಶಪಡಿಸಲಾ ಗಿದೆ. ನಿನ್ನೆ ರಾತ್ರಿ ೧೦.೩೦ರ ವೇಳೆ ಕಾಸರಗೋಡು ಕೆಎಸ್‌ಆರ್‌ಟಿಸಿ ಡಿಪೋ ಸಮೀಪದಿಂದ ಈತನನ್ನು ಬಂಧಿಸಲಾಗಿದೆ. ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದಾಗ ಇಬ್ರಾಹಿಂ ಇಷ್ಫಾಕ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಬಳಿಕ ಈತನನ್ನು ಪೊಲೀಸರು ತನಿಖೆಗೊಳಪಡಿಸಿದಾಗ ಮಾದಕವಸ್ತು ಈತನ ಕೈಯಲ್ಲಿರುವುದು ತಿಳಿದು ಬಂದಿದೆ. ಎಸ್‌ಐ ಯೊಂದಿಗೆ ಸಿಪಿಒಗಳಾದ ವಿಜಿತ್, ಸಜಿಲೇಶ್ ಎಂಬಿವರು ಕಾರ್ಯಾಚರಣೆ ತಂಡದಲ್ಲಿದ್ದರು.

Leave a Reply

Your email address will not be published. Required fields are marked *

You cannot copy content of this page