ಎಕೆಪಿಎಯಿಂದ ದೀಪಾವಳಿ ಆಚರಣೆ

ಕಾಸರಗೋಡು: ಆಲ್ ಕೇ ರಳ ಫೋಟೋಗ್ರಾಫರ್ಸ್ ಅಸೋ ಸಿಯೇಷನ್ ವೆಸ್ಟ್ ಯೂನಿಟ್ ಕಾಸರಗೋಡು ಇದರ ವತಿಯಿಂದ ನೀರ್ಚಾಲು ಬಳಿಯ ಕನ್ನೆಪ್ಪಾಡಿ “ಆಶ್ರಯ ಆಶ್ರಮ”ದಲ್ಲಿ ದೀಪಾವಳಿ, ಗೋಪೂಜೆ ವೃದ್ಧರು ಹಾಗೂ ಮಕ್ಕಳ ಜೊತೆ ಸಿಹಿ ಹಂಚಿ, ಆಚರಿಸಲಾಯಿತು. ಯೂ ನಿಟ್ ಉಪಾಧ್ಯಕ್ಷ ಗಣೇಶ್ ರೈ ಮಧೂರು, ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್, ವಲಯ ಜತೆ ಕಾರ್ಯದರ್ಶಿ ಮನು, ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ, ಕೋಶಾ ಧಿಕಾರಿ ಅಮಿತ್, ಜತೆ ಕಾರ್ಯದರ್ಶಿ ವಿಶಾಖ್ ಪಾಲ್ಗೊಂಡರು. ಯುನಿಟ್ ವತಿಯಿಂದ ಆಶ್ರಮಕ್ಕೆ ತರಕಾರಿ ನೀಡಲಾಯಿತು. ಆಶ್ರಮದ ಸದಸ್ಯ ಜಯರಾಮ ಸ್ವಾಗತಿಸಿದರು.

You cannot copy contents of this page