ಎಡನೀರು ಶ್ರೀಗಳ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆ ಆರಂಭ

ಬದಿಯಡ್ಕ: ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆ ನಿನ್ನೆ ಪ್ರಾರಂಭ ವಾಯಿತು. ಬೆಳಗ್ಗೆ ಮಹಾಗಣಪತಿ ಹೋಮ, ವ್ರತಾಚರಣೆಯ ಭಾಗವಾಗಿ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿತು. ವ್ಯಾಸಪೂಜೆಯನ್ನು ನೆರವೇರಿಸುವುದರೊಂದಿಗೆ ಶ್ರೀಗಳ 60 ದಿನಗಳ ವ್ರತಾಚರಣೆ ಆರಂಭವಾಯಿತು. ಎಲ್ಲಾ ದಿನಗಳಲ್ಲಿಯೂ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

RELATED NEWS

You cannot copy contents of this page