ಎಡಪಕ್ಷಗಳಿಗೆ ದೇಶದಲ್ಲಿ 8 ಸೀಟುಗಳು
ಹೊಸದಿಲ್ಲಿ: ರಾಷ್ಟ್ರೀಯ ಮಟ್ಟದಲ್ಲಿ ಎಡ ಪಕ್ಷಗಳಿಗೆ ಒಟ್ಟು 8 ಸೀಟುಗಳು ಮಾತ್ರವ್ ಲಭಿಸಿವೆ. ಇದರಲ್ಲಿ ಸಿಪಿಎಂಗೆ 4, ಸಿಪಿಐಗೆ 2, ಸಿಪಿಐಎಂಎಲ್ಗೆ 2 ಸೀಟುಗಳಾಗಿವೆ.
ಸಿಪಿಎಂಗೆ ಕೇರಳದಲ್ಲಿ ಒಂದು, ತಮಿಳುನಾಡಿನಲ್ಲಿ ಎರಡು, ರಾಜಸ್ತಾನದಲ್ಲಿ ಒಂದು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ. ರಾಜಸ್ತಾನದ ಸಿಕಾರ್ ಮಂಡ ಲದಲ್ಲಿ ರಾಜ್ಯ ಕಾರ್ಯದರ್ಶಿ ಆಂರಾ ರಾಂಗೆ 72,896 ಮತಗಳು ಲಭಿಸಿದೆ. ತಮಿಳು ನಾಡಿನಲ್ಲಿ ಮಧುರೆ, ದಿಂಡಿಗಲ್ ಮಂಡಲಗಳಲ್ಲಿ ಜಯ ಸಾಧಿಸಿದೆ. ಮಧುರೆಯಲ್ಲಿ ಎಸ್. ವೆಂಕಟೇಶನ್, ದಿಂಡಿಗಲ್ನಲ್ಲಿ ಆರ್. ಸಚ್ಚಿದಾನಂದ ಎಂಬಿವರು ಗೆಲುವು ಸಾಧಿಸಿದ ಸಿಪಿಎಂ ಅಭ್ಯರ್ಥಿಗಳಾಗಿದ್ದಾರೆ.
ತಮಿಳುನಾಡಿನ ತಿರುಪುರ್, ನಾಗಪಟ್ಟಣಂ ಎಂಬೆಡೆಗಳಲ್ಲಿ ಸಿಪಿಐ ಜಯ ಸಾಧಿಸಿದೆ. ನಾಗಪಟ್ಟಣದಲ್ಲಿ ವಿ. ಸೆಲ್ವರಾಜ್, ತಿರುಪುರ್ನಲ್ಲಿ ಕೆ. ಸುಬ್ಬರಾಜನ್ ಜಯಗಳಿಸಿದ್ದಾರೆ. ಬಿಹಾರದ ಅರ ಮಂಡಲದಲ್ಲಿ ಸುಧಾಮ ಪ್ರಸಾದ್, ಕಾರಾಕ್ಕಾಡ್ ಮಂಡಲದಲ್ಲಿ ರಾಜಾರಾಂ ಸಿಂಗ್ ಎಂಬೀ ಸಿಪಿಐಎಂಎಲ್ ಅಭ್ಯ ರ್ಥಿಗಳು ಗೆಲುವು ಸಾಧಿಸಿದ್ದಾರೆ.