ಎನ್.ಡಿ.ಎ. ಅಭ್ಯರ್ಥಿ ಪ್ರಚಾರ ಪರ್ಯಟನೆ ಆರಂಭ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಉಮೇದ್ವಾರರಾಗಿ ಸ್ಪರ್ಧಿಸುತ್ತಿರುವ ಬಿಜೆಪಿಯ ಎಂ.ಎಲ್. ಅಶ್ವಿನಿಯವರು ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ  ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರಂತೆ ಅವರು ಇಂದು ಬೆಳಿಗ್ಗೆ ಎಡನೀರು ಸಂದರ್ಶಿಸಿ ಮಠಾಧೀಶರ ಆಶೀರ್ವಾದ ಪಡೆದರು. ಬಳಿಕ ಅವರು ಮಧೂರು ಕ್ಷೇತ್ರಕ್ಕೂ ಸಂದರ್ಶಿಸಿ ಪ್ರಾರ್ಥನೆ ನಡೆಸಿದರು. ಬಳಿಕ ಕೊಂಡೆವೂರು ಮಠ, ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ದರ್ಶನ, ಮಧ್ಯಾಹ್ನದ ಬಳಿಕ ಮುಚ್ಚಿಲೋಟ್ ಭಗವತೀ ಕ್ಷೇತ್ರ ಮತ್ತು ಶಿರಿಯಾ ಕ್ಷೇತ್ರ ಸಂದರ್ಶಿಸುವರು.

RELATED NEWS

You cannot copy contents of this page