ಐತಿಹಾಸಿಕ ದಾಖಲೆ: ಏಷ್ಯನ್‌ಗೇಮ್ಸ್‌ನಲ್ಲಿ ಪದಕ ಗಳಿಕೆಯಲ್ಲಿ ಶತಕ ಭಾರಿಸಿದ ಭಾರತ

ಹ್ಯಾಂಗ್ಝಾ: ಚೀನಾದ ಹ್ಯಾಂಗ್ಝಾನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ -೨೦೨೩ರಲ್ಲಿ ಭಾರತ ೧೦೦ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಅಧಿಕೃತವಾಗಿ ಭಾರತ ಇಲ್ಲಿಯವರೆಗೆ ಶತಕ ಪದಕ ಗೆದ್ದಿದೆ.

ಇದು ೨೦೨೩ ಆವೃತ್ತಿಯ ಏಷ್ಯನ್ ಕ್ರೀಡಾಕೂಟದಲ್ಲಿ  ಭಾರತದ ಅತ್ಯುತ್ತಮ ಆವೃತ್ತಿ ಮಾತ್ರವಲ್ಲ, ಪದಕ ಪಟ್ಟಿಯಲ್ಲಿ ಮೂರು ಅಂಕಿ ಗಡಿಯನ್ನು ದಾಟುತ್ತಿರುವುದೂ ಇದೇ ಮೊದಲು. ಈ ಹಿಂದೆ ೨೦೧೮ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ೭೦ ಪದಕಗಳನ್ನು ಜಯಿಸಿತ್ತು. ಅದನ್ನು ಮೀರಿ ಈ ಬಾರಿ ೧೦೦ ಪದಕಗಳನ್ನು ಗೆಲ್ಲುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ.

ಇದು ಈ ಸಾಧನೆಯಲ್ಲಿ ಭಾಗಿಯಾಗಿರುವ ನಮ್ಮ ಕ್ರೀಡಾ ಪಟುಗಳ ಕನಸುಗಳು, ಸಮರ್ಪಣೆ ಮತ್ತು ತಂಡದ ಕೆಲಸದ ಶಕ್ತಿಗೆ ಸಾಕ್ಷಿಯಾಗಿದೆ. ಈ ಸಾಧನೆಯು ಮುಂದಿನ ಪೀಳಿಗೆಗೆ ಇನ್ನಷ್ಟು ಸ್ಪೂರ್ತಿ ನೀಡಲಿದೆ. ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ಏನು ಬೇಕಾದರೂ ಸಾಧ್ಯ ಎಂಬುದನ್ನು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ ಭಾರತದ ಕ್ರೀಡಾಳುಗಳು ಸಾಬೀತು ಪಡಿಸಿದ್ದಾರೆ.

ನಿನ್ನೆ ಇಲ್ಲಿ ನಡೆದ ಮಹಿಳಾ ಕಬ್ಬಡ್ಡಿ ಫೈನಲ್‌ನಲ್ಲಿ ಚೈನೀಸ್ ತೈಪೆ ವಿರುದ್ಧ ೨೬-೨೫ ಅಂಕಗಳ ರೋಚಕ ಗೆಲುವು ಸಾಧಿಸಿದ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ರೋಚಕ ಗೆಲುವು ಸಾಧಿಸಿ ಅಭೂತಪೂರ್ವ ೧೦೦ನೇ ಪದಕ ಗೆದ್ದುಕೊಂಡಿತು. ಆ ಮೂಲಕ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ದಾಖಲೆಯನ್ನು ಪದಕಗಳ ಪಟ್ಟಿಯಲ್ಲಿ ಬರೆದಿದೆ.

Leave a Reply

Your email address will not be published. Required fields are marked *

You cannot copy content of this page