ಐಲ ಬೀಚ್ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಧರಾಶಾಹಿ

ಉಪ್ಪಳ: ಐಲ ಬೀಚ್ ರಸ್ತೆಯಲ್ಲಿ ಹತ್ತರಷ್ಟು ವಿದ್ಯುತ್ ಕಂಬಗಳು ನೆಲಕ್ಕುರುಳಿದ ಹಿನ್ನೆಲೆಯಲ್ಲಿ  ಈ ಮೂಲಕ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಐಲ ಶಿವಾಜಿನಗರದಿಂದ  ಕುದುಪುಳು ವರೆಗೆ ಸ್ಥಾಪಿಸಿರುವ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ನಿನ್ನೆ ರಾತ್ರಿ ಸುರಿದ ಮಳೆ ಜತೆಗೆ ಬೀಸಿದ ಗಾಳಿಗೆ ಸಿಲುಕಿ ಗಾಳಿಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದಿತ್ತು. ಇದರಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಮುಸೋಡಿಯಿಂದ ಪೆರಿಂಗಡಿಗೆ ತೆರಳುವ ಕರಾವಳಿ ರಸ್ತೆಯಲ್ಲಿ ಕಂಬಗಳು ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಅದೇ ರೀತಿ ಈ ಭಾಗದಲ್ಲಿ  ವಿದ್ಯುತ್ ವಿತರಣೆ ಮೊಟಕುಗೊಂಡು ಜನರು ಸಮಸ್ಯೆಗೀಡಾಗಿದ್ದಾರೆ.

RELATED NEWS

You cannot copy contents of this page