ಓಣಂಗೆ ಹೆಚ್ಚುವರಿ ಅಕ್ಕಿ ನ್ಯಾಯಬೆಲೆಗೆ ನೀಡುವುದಾಗಿ ಸಚಿವ ಜಿ.ಆರ್. ಅನಿಲ್
ತಿರುವನಂತಪುರ: ಕೇಂದ್ರ ಸರಕಾರದ ಸಹಾಯ ಲಭಿಸದಿದ್ದರೂ ಓಣಂ ಹಬ್ಬದ ಸಂದರ್ಭದಲ್ಲಿ ಸಪ್ಲೈ ಕೋ ಮಾರಾಟದಂಗಡಿಗಳಲ್ಲೂ ರೇಶನ್ ಅಂಗಡಿಗಳ ಮೂಲಕ ಹೆಚ್ಚುವರಿಯಾಗಿ ಅಕ್ಕಿಯನ್ನು ನ್ಯಾಯಬೆಲೆಗೆ ವಿತರಿಸುವು ದಾಗಿ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ. ಸಪ್ಲೈ ಕೋ ಮೂಲಕ ರೇಶನ್ ಕಾರ್ಡ್ ಮಾಲಕರಿಗೆ 29 ರೂ.ಗೆ ನೀಡುವ 2 ಕಿಲೋ ಗ್ರಾಂ ಬೆಳ್ತಿಗೆ ಅಕ್ಕಿ ಹಾಗೂ 33 ರೂ.ಗೆ ನೀಡುವ 8 ಕಿಲೋ ಗ್ರಾಂ ಶಬರಿ ಅಕ್ಕಿ ಮತ್ತೂ ಬೆಲೆ ಕಡಿತಗೊ ಳಿಸಿ ನೀಡಲಾಗುವುದು. ತೆಂಕಣ ಜಿಲ್ಲೆಗಳಲ್ಲಿ ಕುಚ್ಚಿಲಕ್ಕಿ ಹಾಗೂ ಉತ್ತರ ಜಿಲ್ಲೆಗಳಲ್ಲಿ ಕುರ್ವಾ ಅಕ್ಕಿಯನ್ನು ಕೆ-ರೈಸ್ ಆಗಿ ವಿತರಿಸಲಾಗುವುದು. ಅಕ್ಕಿ ಪ್ಯಾಕೆಟ್ ಕೂಡಾ ಬೆಲೆ ಕಡಿತದಲ್ಲಿ ವಿತರಿಸುವುದಾಗಿ ಸಚಿವರು ತಿಳಿಸಿದ್ದಾರೆ.
ರೇಶನ್ ಅಂಗಡಿಗಳ ಮೂಲಕ 53 ಲಕ್ಷ ನೀಲಿ, ಬಿಳಿ ಕಾರ್ಡ್ ವಾರೀಸುದಾರರಿಗೆ ಸ್ಪೆಷಲ್ ಅಕ್ಕಿ ನೀಡು ವುದಾಗಿಯೂ ಅವರು ತಿಳಿಸಿದ್ದಾರೆ. ಈ ಮೊದಲು ಓಣಂ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಅಕ್ಕಿ ಮಂಜೂರು ಮಾಡಬೇಕೆಂಬ ರಾಜ್ಯ ಸರಕಾರದ ಬೇಡಿಕೆ ಕೇಂದ್ರ ಸರಕಾರ ತಿರಸ್ಕರಿಸಿತ್ತು. ಕಾರ್ಡ್ ಒಂದಕ್ಕೆ ೫ ಕಿಲೋ ಅಕ್ಕಿ ಹೆಚ್ಚುವರಿಯಾಗಿ ನೀಡಬೇಕೆಂದು ಕೇರಳ ಕೇಂದ್ರದೊಂದಿಗೆ ಆಗ್ರಹಿಸಿತ್ತು. ಈ ಬಗ್ಗೆ ರಾಜ್ಯ ನಾಗರಿಕ ಆಹಾರ ಪೂರೈಕೆ ಸಚಿವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೊಂದಿಗೆ ಮಾತುಕತೆ ನಡೆಸಿದರು. ಆದರೆ ಈಗ ಆ ಬಗ್ಗೆ ಪರಿಗಣಿಸಲು ಆಗದು ಎಂದು ಕೇಂದ್ರ ಸಚಿವ ತಿಳಿಸಿದ್ದರು.