ಸ್ಕೂಟರ್ ಚಲಾಯಿಸುತ್ತಿದ್ದಂತೆ ಹೃದಯಾಘಾತ: ವ್ಯಕ್ತಿ ಮೃತ್ಯು

ಕುಂಬಳೆ: ಸ್ಕೂಟರ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ವ್ಯಕ್ತಿ ಮೃತಪಟ್ಟ ಘಟನೆ ಸಂಭವಿಸಿದೆ. ಬಂಬ್ರಾಣ ಚೂರಿತ್ತಡ್ಕದ ಅಶ್ರಫ್ ಯಾನೆ ಎಳಾಪ ಅಶ್ರಫ್ (58) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ತಲಪ್ಪಾಡಿ ಟೋಲ್ ಗೇಟ್ ದಾಟಿದ ಕೂಡಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಅಶ್ರಫ್  ಸ್ಕೂಟರ್‌ನಲ್ಲಿ ಮಂಗಳೂರಿಗೆ ತೆರಳುತ್ತಿದ್ದರು. ಟೋಲ್ ಗೇಟ್ ದಾಟಿದ ಕೂಡಲೇ ಹೃದಯಾಘಾತವು ಂಟಾಗಿರುವುದಾಗಿ ಸಂಶಯಿಸಲಾಗುತ್ತಿದೆ. ಸ್ಕೂಟರ್ ರಸ್ತೆಬದಿ ಬಿದ್ದಿದ್ದು ಅಶ್ರಫ್ ಫೂಟ್‌ಪಾತ್‌ನಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದನ್ನು ಕಂಡ ಪರಿಸರ ನಿವಾಸಿಗಳು ಅಶ್ರಫ್‌ರನ್ನು ಕೂಡಲೇ  ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. ಮಂಗಳೂರು ನಿವಾಸಿಯಾದ ಅಶ್ರಫ್ 31 ವರ್ಷಗಳ ಹಿಂದೆ ಚೂರಿತ್ತಡ್ಕಕ್ಕೆ ಬಂದು ಇಲ್ಲಿ ಖಾಯಂ ಆಗಿ ವಾಸಿಸುತ್ತಿದ್ದರೆಂದು ಸಂಬಂಧಿಕರು ತಿಳಿಸಿದ್ದಾರೆ.

ಮಂಗಳೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಶ್ರಫ್‌ರ ಮೃತದೇಹವನ್ನು ರಾತ್ರಿ ೭.೩೦ರ ವೇಳೆಗೆ ಬಂಬ್ರಾಣ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಮೃತರು ಪತ್ನಿ ಸಫಿಯ, ಮಕ್ಕಳಾದ ಅಫ್ರೀದ್, ಜಾಸ್ಮಿನ್, ಇನ್‌ಸಿಮಾಂ, ಸಹೋದರರಾದ ಹನೀಫ, ಮುಹಿಯುದ್ದೀನ್ ಹಾಗೂ ಐವರು ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page