ಕರ್ತವ್ಯ ವೇಳೆ ಮೃತಪಟ್ಟ ಬಸ್ ಚಾಲಕನಿಗೆ ಸಹಾಯ: ಪೆರ್ಮುದೆ- ಕಾಸರಗೋಡು ಜಿಸ್ತಿಯ ಬಸ್‌ನಿಂದ ಇಂದು ಕಾರುಣ್ಯ ಯಾತ್ರೆ

ಕುಂಬಳೆ: ಬಸ್ ಚಲಾಯಿಸುತ್ತಿ ದ್ದಂತೆ ಹೃದಯಾಘಾತವುಂಟಾಗಿ ಮೃತಪಟ್ಟ ಚಾಲಕನ ಕುಟುಂಬಕ್ಕೆ ಸಹಾಯವೊದಗಿಸುವ ಉದ್ದೇಶದಿಂದ ಪೆರ್ಮುದೆ- ಧರ್ಮತ್ತಡ್ಕ- ಬಂದ್ಯೋ ಡು- ಕಾಸರಗೋಡು ರೂಟ್‌ನಲ್ಲಿ ಸಂಚರಿಸುವ ಮೂರು ಜಿಸ್ತಿಯ ಬಸ್‌ಗಳು ಇಂದು ಕಾರುಣ್ಯ ಯಾತ್ರೆ ನಡೆಸುತ್ತಿವೆ. ಇಂದು ಬೆಳಿಗ್ಗೆ ಪೆರ್ಮುದೆಯಿಂದ ಆರಂಭಗೊಂಡ ಕಾರುಣ್ಯ ಯಾತ್ರೆಯನ್ನು ಸಿಪಿಎಂ ಕುಡಾಲ್ ಮೇರ್ಕಳ ಲೋ ಕಲ್ ಸೆಕ್ರೆಟರಿ  ಬಿ.ಎ. ಬಶೀರ್ ಉದ್ಘಾಟಿಸಿದರು. ಸಿಐಟಿಯು ನೇತಾರ ಸಾಕಿರ್, ಜಿಸ್ತಿಯಾ ಬಸ್ ಮಾಲಕ ತಾಜುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. ಕಾರುಣ್ಯ ಯಾತ್ರೆಯ ಅಂಗವಾಗಿ ಇಂದು ಬಸ್‌ನಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿಲ್ಲ. ಬದಲಾಗಿ ಸಂಗ್ರಹವಾಗುವ ಹಣವನ್ನು ಚಾಲಕನ ಕುಟುಂಬಕ್ಕೆ ನೀಡಿ ಸಹಾಯವೊದಗಿಸಲಾಗುವುದು.

You cannot copy contents of this page