ಕಳ್ಳನೋಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ದೆಹಲಿ: ಕಾಸರಗೋಡಿನ ವಿವಿಧ ಸ್ಥಳಗಳಿಂದ 2013ರಲ್ಲಿ ಕಳ್ಳನೋಟು ವಶಪಡಿಸಿಕೊಂಡ  ಪ್ರಕರಣದಲ್ಲಿ ಆರೋಪಿ ಸೆರೆಗೀಡಾಗಿ ದ್ದಾನೆ. 12 ವರ್ಷಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಉಡುಪಿ ನಿವಾಸಿ ಮೊಯ್ದಿನಬ್ಬ ಉಮ್ಮರ್ ಬಿಯಾರ್ ಎಂಬಾತನನ್ನು ಎನ್‌ಐಎ ಬಂಧಿಸಿದೆ. ದುಬಾಯಿ ಯಿಂದ ಇಂಟರ್‌ಪೋಲ್ ಹಾಗೂ ಸಿಬಿಐ ಸಹಾಯದೊಂದಿಗೆ ಈತನನ್ನು ಮುಂಬೈಗೆ ತಲುಪಿಸಿ ಬಂಧಿಸಲಾಗಿದೆ. ಕಳ್ಳನೋಟುಗಳನ್ನು ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಭಾರತಕ್ಕೆ ತಲುಪಿಸಿದ ಆರೋಪದಂತೆ ಎನ್‌ಐಎ ಕೊಚ್ಚಿ ಯೂನಿಟ್ ಮೊಯ್ದಿನಬ್ಬ ಉಮ್ಮರ್ ಬಿಯಾರ್ ವಿರುದ್ಧ 4 ಕೇಸುಗಳನ್ನು ದಾಖಲಿಸಿ ಕೊಂಡಿತ್ತು. 

31 ಲಕ್ಷ ರೂಪಾ ಯಿಗಳ ಕರೆನ್ಸಿ ಸಾಗಿಸಿರುವು ದನ್ನು ಪತ್ತೆಹಚ್ಚಲಾಗಿತ್ತು. ಎನ್ ಐಎ ತನಿಖೆ ತೀವ್ರಗೊಳಿಸುವುದರೊಂದಿಗೆ ಈತ ತಲೆಮರೆಸಿಕೊಂಡಿದ್ದನು.

You cannot copy contents of this page