ಕಾಞಂಗಾಡ್‌ನ ದ್ವೇಷ ಭಾಷಣ: ಯಾವುದೇ ವಿಭಾಗವಾದರೂ ಕ್ರಮ ಕೈಗೊಳ್ಳಬೇಕು- ಸುಪ್ರೀಂಕೋರ್ಟ್
ದೆಹಲಿ: ಕಾಞಂಗಾಡ್‌ನಲ್ಲಿ ಮುಸ್ಲಿಂ ಯೂತ್ ಲೀಗ್ ರ‍್ಯಾಲಿಯಲ್ಲಿ ಒಂದು ಧರ್ಮದ ವಿರುದ್ಧ ದ್ವೇಷ ಭಾಷಣ ಮೊಳಗಿಸಿದ ಘಟನೆಯಲ್ಲಿ ಸುಪ್ರೀಂಕೋರ್ಟ್ ಶಕ್ತಿಯುತ ಪರಾಮರ್ಶೆ ನಡೆಸಿದೆ. ದ್ವೇಷ ಭಾಷಣ ಯಾರು ನಡೆಸಿದರೂ ಒಂದೇ ರೀತಿಯಲ್ಲಿ ಕಾನೂನು ಪ್ರಕಾರವಾಗಿ ಕ್ರಮ ಸ್ವೀಕರಿಸಬೇಕೆಂದು ನ್ಯಾಯಾಧೀಶರಾದ ಸಂಜೀವ್ ಖನ್ನ, ಎಸ್.ವಿ.ಎನ್. ಭಟ್ಟಿ ಎಂಬಿವರು ಒಳಗೊಂಡ ವಿಭಾಗೀ ಯ ಪೀಠ ಸ್ಪಷ್ಟಪಡಿಸಿದೆ. ದ್ವೇಷ ಭಾಷಣಗಳಲ್ಲಿ ಧರ್ಮ ನೋಡದೆ ದೂರು ಲಭಿಸಲು ಕಾದು ನಿಲ್ಲದೆ ಕೂಡಲೇ ಸ್ವತಃ ಎಫ್‌ಐಆರ್ ದಾಖಲಿಸಬೇಕೆಂದು ಸುಪ್ರೀಂಕೋ ರ್ಟ್ ಎ.೨೮ರಂದು ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ಕಠಿಣ ನಿರ್ದೇಶ ನೀಡಿತ್ತು.
ಹರಿಯಾಣದ ನೂಹಿಯಲ್ಲಿ ಮುಸ್ಲಿಂ ಸಮುದಾಯ ವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಬಹಿಷ್ಕರಿಸಲಿರುವ ಆಹ್ವಾನ ನಡೆಯು ತ್ತಿದೆ ಎಂದು ದೂರಿ, ದೇಶದ ದ್ವೇಷ ಭಾಷಣಗಳ ವಿರುದ್ಧ ಕ್ರಮ ಆಗ್ರಹಿಸಿ ಯೂ ನೀಡಿದ ಅರ್ಜಿಗಳನ್ನು ಪರಿಗಣಿಸಿ ನ್ಯಾಯಾಲಯ ಈ ಪರಾಮರ್ಶೆ ನಡೆಸಿದೆ. ಪ್ರಕರಣವನ್ನು ೨೫ರಂದು ಮತ್ತೆ ಪರಿಗಣಿಸಲು ತೀರ್ಮಾನಿಸಲಾಗಿದೆ.