ಕಾರಿನಲ್ಲಿ ಹ್ಯಾಶಿಶ್ ಸಾಗಿಸಿದ ಪ್ರಕರಣ: ಓರ್ವ ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಮಾದಕ ವಸ್ತುವಾದ ಹ್ಯಾಶಿಶ್ ಸಾಗಿಸಿದ ಪ್ರಕರಣದ ಎರಡನೇ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಕೆ. ಪ್ರಿಯಾ ಅವರು ಎರಡು ವರ್ಷ ಕಠಿಣ ಸಜೆ ಹಾಗೂ 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಕುಂಬಳೆ ಚೇಡಿಕಾವಿನ ಎಂ. ಮುಹಮ್ಮದ್ ಹನೀಫಾ (30) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಇದೇ ಪ್ರಕರಣದ ಒಂದನೇ ಆರೋಪಿ ಸೀತಾಂಗೋಳಿ ಎಕೆಜಿ ನಗ ರದ ಫೈಸಲ್ (38) ಎಂಬಾತ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ  ಹಾಜರಾ ಗದ ಕಾರಣ ಆತನ ಮೇಲಿನ ಕೇಸಿನ ವಿಚಾರಣೆಯನ್ನು ನ್ಯಾಯಾಲ ಯ ಪ್ರತ್ಯೇಕಗೊಳಿಸಿ ಅದರ ವಿಚಾರಣೆಯನ್ನು ಮುಂದೂಡಿದೆ.

2018 ಸೆಪ್ಟಂಬರ್ 22ರಂದು ಬೆಳಿಗ್ಗೆ ಕಾಸರಗೋಡು-ಹೊಸದುರ್ಗ ರಾಜ್ಯ ಹೆದ್ದಾರಿಯ ಪಿಲಿಕುಂಜೆ ಚಂದ್ರಗಿರಿ ಸೇತುವೆಯ ಅಡಿಭಾಗ ದಲ್ಲಿ ಅಂದು ಕಾಸರಗೋಡು ಠಾಣೆ ಎಸ್‌ಐ ಆಗಿದ್ದ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ 450 ಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಿತ್ತು.  ಇದಕ್ಕೆ ಸಂ ಬಂಧಿಸಿ ಈ ಇಬ್ಬರು ಆರೋಪಿಗಳನ್ನು ಬಂಧಿ ಸಿ ಅವರ ವಿರುದ್ಧ ಕೇಸು ದಾಖಲಿ ಸಲಾಗಿತ್ತು. ಆ ಪ್ರಕರಣದಲ್ಲಿ ಎರಡನೇ ಆರೋಪಿಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ಈ ಪ್ರಕರಣದ ಬಗ್ಗೆ ಅಂದು ಕಾಸರಗೋಡು ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಎ. ಅಬ್ದುಲ್ ರಹೀಂ ಮುಂದಿನ ತನಿಖೆ ನಡೆಸಿದ್ದರು. ನಂತರ ಎಸ್‌ಐ  ವಿ.ಎಸ್. ಬಿನೀಶ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಗವರ್ನ್ ಮೆಂಟ್ ಫ್ಲೀಡರ್ ಜಿ. ಚಂದ್ರಮೋಹನ್ ಮತ್ತು ನ್ಯಾಯವಾದಿ ಚಿತ್ರಕಲಾ ನ್ಯಾಯಾಲ ಯದಲ್ಲಿ ವಾದಿಸಿದ್ದರು.

Leave a Reply

Your email address will not be published. Required fields are marked *

You cannot copy content of this page