ಕಾಸರಗೋಡಿನಿಂದ ಕಳವಿಗೀಡಾದ ಬೈಕ್ ಉಪ್ಪಳದಲ್ಲಿ ಪತ್ತೆ

ಕಾಸರಗೋಡು: ಕಾಸರ ಗೋಡಿನಿಂದ ನಾಪತ್ತೆಯಾಗಿದ್ದ ಬುಲ್ಲೆಟ್ ಬೈಕ್ ಉಪ್ಪಳದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಪ್ಪಳ ಬಳಿಯ ಐಲ- ಪಾರಕಟ್ಟೆ ರಸ್ತೆ ಬದಿ  ಮೊನ್ನೆ ಸಂಜೆ ಬೈಕ್ ಉಪೇಕ್ಷಿತ ಸ್ಥಿತಿಯಲ್ಲಿರುವುದನ್ನು ಕಂಡ ನಾಗರಿಕರು ಮಂಜೇಶರ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಅದನ್ನು ಕಸ್ಟಡಿಗೆ ತೆಗೆದು ಪರಿಶೀಲನೆ ನಡೆಸಿದಾಗ ಅದು ಕಾಸರಗೋಡಿ ನಿಂದ ಕಳವಿಗೀಡಾದುದೆಂದು ತಿಳಿದು ಬಂತು. ಈ ಬಗ್ಗೆ ಮಾಹಿತಿ ಲಭಿಸಿದ ಕಾಸರಗೋಡು ಪೊಲೀಸರು ಮಂಜೇಶ್ವರಕ್ಕೆ ತೆರಳಿ ಬೈಕ್ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ರೈಲು ನಿಲ್ದಾಣದ ಹೊರಗಡೆ ನಿಲ್ಲಿಸಿದ್ದ ಮಲಪ್ಪುರಂ ನಿವಾಸಿಯೂ ಮೇಲ್ಪರಂಬದ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುವ ಸಿರಾಜ್ ಎಂಬವರ ಬುಲ್ಲೆಟ್ ಬೈಕ್ ಫೆಬ್ರವರಿ  ೨೬ರಂದು ನಾಪತ್ತೆಯಾಗಿದೆ. ಈ ಬಗ್ಗೆ ಅವರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಕೇಸು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಬೈಕ್ ಉಪ್ಪಳದಲ್ಲಿ ಪತ್ತೆಯಾಗಿದೆ.

Leave a Reply

Your email address will not be published. Required fields are marked *

You cannot copy content of this page