ಕಾಸರಗೋಡಿನ ಮೂರು ಸಹಿತ ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ 49 ವಾರ್ಡ್‌ಗಳಿಗೆ ಜು.30ರಂದು ಉಪಚುನಾವಣೆ

ಕಾಸರಗೋಡು: ಕಾಸರಗೋಡಿನ ಮೂರು ಸೇರಿದಂತೆ ರಾಜ್ಯದ 13 ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ತೆರವು ಬಿದ್ದಿರುವ 49 ವಾರ್ಡ್‌ಗಳಿಗೆ ಜುಲೈ 30ರಂದು ಉಪಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ.

ಇದರಂತೆ ಕಾಸರಗೋಡು ನಗರ ಸಭೆಯ ಖಾಸೀಲೈನ್ ಮತ್ತು ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಕೋಟೆಕುಂಜೆ (ಕೋಟೆಕುನ್ನು) ಮತ್ತು ಕಲ್ಲಂಗೈ ವಾರ್ಡ್‌ಗಳಿಗೂ ಉಪ ಚುನಾವಣೆ ನಡೆಯಲಿದೆ.  ಇದರ ಹೊರತಾಗಿ  ತಿರುವನಂತಪುರ ಜಿಲ್ಲಾ ಪಂಚಾಯತ್‌ನ ವೆಳ್ಳನಾಡು ವಾರ್ಡ್, ಬ್ಲೋಕ್ ಪಂಚಾಯತ್‌ಗಳ 4 ವಾರ್ಡ್‌ಗಳು,  ಇತರ ನಗರಸಭೆಗಳ 3 ಹಾಗೂ ಇತರ ವಿವಿಧ ಗ್ರಾಮ ಪಂಚಾಯತ್‌ಗಳ 36 ವಾರ್ಡ್‌ಗಳಿಗೆ ಈತಿಂಗಳ 30ರಂದು ಉಪಚುನಾವಣೆ ನಡೆಯಲಿದೆ.

ಚುನಾವಣಾ ಅಧಿಸೂಚನೆ ನಾಳೆ ಹೊರಬರಲಿದೆ. ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜ್ಯಾರಿಗೊಂ ಡಿದೆ. ಜುಲೈ 4ರಿಂದ 11ರ ತನಕ ನಾಮಪತ್ರ ಸಲ್ಲಿಸಬಹುದು. ಜು. 12ರಂದು ಅವುಗಳ ಸೂಕ್ಷ್ಮ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆಯುವ ಕೊನೆಯ ದಿನಾಂಕ ಜುಲೈ 15ರಂದು ಆಗಿದೆ.  ಮತ ಎಣಿಕೆ ಜುಲೈ 31ರಂದು ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿದೆ.

ಉಪಚುನಾವಣೆ ನಡೆಯಲಿರುವ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣಾ ನೀತಿ ಸಂಹಿತೆ ಅನ್ವಯಗೊಳ್ಳಲಿದೆ. ಜುಲೈ 1ರಂದು ಪ್ರಕಟಿಸಲಾದ ಹೊಸ ಮತದಾರರ ಯಾದಿಯ ಆಧಾರದಲ್ಲಿ ಚುನಾವಣೆ ನಡೆಯಲಿದೆ. ಮತದಾರ ಯಾದಿ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಕಚೇರಿ, ಗ್ರಾಮ ಮತ್ತು ತಾಲೂಕು ಕಚೇರಿಗಳಲ್ಲಿ ಪರಿಶೀಲನೆಗೆ ಲಭ್ಯವಿದೆ. ಮಾತ್ರವಲ್ಲ ರಾಜ್ಯ ಚುನಾ ವಣಾ ಆಯೋಗದ ವೆಬ್‌ಸೈಟ್‌ನಲ್ಲ್ಲೂ ಇದನ್ನು ಪರಿಶೀಲಿಸಬಹುದಾಗಿದೆ.

Leave a Reply

Your email address will not be published. Required fields are marked *

You cannot copy content of this page