ಕಾಸರಗೋಡಿನ ಹಿರಿಯ ವ್ಯಾಪಾರಿ ಅನಂತ ಭಕ್ತ ನಿಧನ
ಕಾಸರಗೋಡು: ಕಾಸರಗೋಡಿನ ಹಿರಿಯ ವ್ಯಾಪಾರಿ, ಕಾಸರಗೋಡು ತಾಲೂಕು ಕಚೇರಿ ಸಮೀಪದ ವಾಸುದೇವ ನಿವಾಸದ ಅನಂತ ಭಕ್ತ (102) ನಿಧನ ಹೊಂದಿದರು. ಇವರು ಕಾಸರಗೋಡು ಕೋಟೆ ರಸ್ತೆಯ ಭಕ್ತ ಟ್ರೆಡರ್ಸ್ ಮಾಲ ಕರೂ ಆಗಿದ್ದಾರೆ. ಮಾತ್ರವಲ್ಲ ಕಾಸರಗೋ ಡಿನಲ್ಲಿ ಈ ಹಿಂದೆ ಸೇವೆ ನಡೆಸುತ್ತಿದ್ದ ಖಾಸಗೀ ಬಸ್‌ವೊಂದರ ಮೆನೇಜಿಂಗ್ ಪಾರ್ಟನರ್ ಕೂಡಾ ಆಗಿದ್ದರು.
ಕಾಸರಗೋಡು ಶ್ರೀ ಮಲ್ಲಿ ಕಾರ್ಜುನ ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಕಾಸರಗೋಡು ವರದರಾಜ ವೆಂಕಟ್ರಮಣ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಪದಾಧಿ ಕಾರಿಯಾಗಿಯೂ ಖಾಸಗಿ ಬಸ್ ಮಾಲಕ ಸಂಘಟನೆಯ ಸೇವೆ ಸಲ್ಲಿಸಿದ್ದರು. ದಿ| ಅನಸೂಯ ಭಕ್ತ ಇವರ ಪತ್ನಿಯಾಗಿದ್ದಾರೆ. ಮೃತರು ಮಕ್ಕಳಾದ ರಂಜಿನಿ, ಜಯಲಕ್ಷ್ಮಿ, ಶೋಭಾ, ರಂಗನಾಥ ಭಕ್ತ, ಅಳಿಯ ಮತ್ತು ಸೊಸೆ ಯಂದಿರಾದ ವೆಂಕಟೇಶ್ ಕಾಮತ್, ಶಾಂತಿ ಭಕ್ತ, ವೃಂದ ಭಕ್ತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.