ಕಾಸರಗೋಡು ಜನರಲ್ ಆಸ್ಪತ್ರೆ ಇನ್ನು ಮೆಡಿಕಲ್ ಕಾಲೇಜು ಆಸ್ಪತ್ರೆ: ನಾಮಫಲಕ ಸ್ಥಾಪನೆ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆ ಇನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಯಾಗಿ ಬದಲಾಗಲಿದೆ. ಅದಕ್ಕೆ ಹೊಂದಿಕೊಂಡು  ಜನರಲ್ ಆಸ್ಪತ್ರೆಯಲ್ಲಿ ‘ಕಾಸರಗೋಡು ಮೆಡಿಕಲ್ ಕಾಲೇಜು ಹಾಸ್ಪಿಟಲ್’ ಎಂಬ ನಾಮ ಫಲಕವನ್ನು  ಸ್ಥಾಪಿಸಲಾಗಿದೆ. ಜನರಲ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜ ನ್ನಾಗಿ, ರಾಜ್ಯ ಸರಕಾರ ಈಗಾಗಲೇ ವಿದ್ಯುಕ್ತವಾಗಿ ಅಧಿಸೂಚನೆ ಜ್ಯಾರಿಗೊಳಿ ಸಿದ್ದು, ಅದರ ಬೆನ್ನಲ್ಲೇ ಈಗ ಆರೋಗ್ಯ ಇಲಾಖೆ ಈ ನಾಮಫಲಕ ಸ್ಥಾಪಿಸಿದೆ.

ಇದರಂತೆ ಜನರಲ್ ಆಸ್ಪತ್ರೆಯಲ್ಲಿ ಶೀಘ್ರ ಎಂಬಿಬಿಎಸ್ ಕೋರ್ಸ್ ಆರಂಭಗೊಳ್ಳಲಿದೆ. ಅದಕ್ಕಿರುವ ಎಲ್ಲಾ ಪೂರ್ವಭಾವಿ ಕ್ರಮಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಇದರಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ತಜ್ಞರ ತಂಡ ಈಗಾಗಲೇ ಜನರಲ್ ಆಸ್ಪತ್ರೆಗೆ ಆಗಮಿಸಿ ಅಗತ್ಯದ ಪರಿಶೀಲನೆ ನಡೆಸಿದೆ. ಮಾತ್ರವಲ್ಲ ಡೈರೆಕ್ಟರ್ ಆಫ್ ಮೆಡಿಕಲ್ ಎಜ್ಯುಕೇಷನ್ ಕೂಡಾ ಇದಕ್ಕಿರುವ ಅಗತ್ಯದ ಕ್ರಮ ಈಗಾಗಲೇ ನಡೆಸಿದೆ. ಜನರಲ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನಾ ಗಿಸುವ ಯೋಜನೆಗೆ ಕೇರಳ ಆರೋಗ್ಯ ವಿಶ್ವವಿದ್ಯಾಲಯದ  ಅಂಗೀಕಾರವೂ ಲಭಿಸಿದೆ. ಇನ್ನು ರಾಷ್ಟ್ರೀಯ ವೈದ್ಯ ಕೀಯ ಆಯೋಗದ ಅಂಗೀಕಾರ ಮಾತ್ರ ಲಭಿಸಲು ಬಾಕಿ ಇದ್ದು, ಅದು ಲಭಿಸಿದ ಬಳಿಕ ಇಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಗೊಳ್ಳಲಿದೆ. ವೈದ್ಯಕೀಯ ಆಯೋಗದ ಅಂಗೀ ಕಾರಕ್ಕಾಗಿ ಡೈರೆಕ್ಟರ್ ಆಫ್ ಮೆಡಿಕಲ್ ಎಜ್ಯುಕೇಷನ್, ವೈದ್ಯ ಕೀಯ ಆಯೋಗಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದೆ.

ಎಂಬಿಬಿಎಸ್ ಕೋರ್ಸ್ ಆರಂಭಿಸಬೇಕಾಗಿದ್ದಲ್ಲಿ ಕನಿಷ್ಠ 220ರಷ್ಟು ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ಸೌಕರ್ಯ, ದಾಖಲಿಸಿ ಚಿಕಿತ್ಸೆ ನೀಡಿದ ಮೂರು ವರ್ಷಗಳ ಅನುಭವ ಇತ್ಯಾದಿ ರಾಷ್ಟ್ರೀಯ ವೈದ್ಯಕೀಯ ಆಯೋಗದ  ಮಾನದಂಡ ಗಳನ್ನು ಪಾಲಿಸಬೇಕಾಗಿದೆ. ಇಂತಹ ಎಲ್ಲಾ ಮಾನದಂಡಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆ  ಹೊಂದಿದೆ. ಉಕ್ಕಿನಡ್ಕದಲ್ಲಿ ಕಾಸರಗೋಡು ವೈದ್ಯಕೀಯ ಕಾಲೇಜು ಆರಂಭಿಸಲು ನಿರ್ಮಿಸಲಾಗುತ್ತಿರುವ ಕಟ್ಟಡ ನಿರ್ಮಾಣ ಕೆಲಸ ಹಲವು ವರ್ಷಗಳಾದರೂ ಈ ತನಕ ಪೂರ್ಣಗೊಳ್ಳದೆ ಅದು ಅರ್ಧದಲ್ಲೇ ಉಳಿದುಕೊಂಡಿರುವ ಕಾರಣದಿಂದಾಗಿ ಅಲ್ಲಿ ಆರಂಭಿಸ ಬೇಕಾಗಿದ್ದ ವೈದ್ಯಕೀಯ ಕಾಲೇಜನ್ನು ನಂತರ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಆರಂಭಿಸುವ ತೀರ್ಮಾನಕ್ಕೆ ರಾಜ್ಯ ಸರಕಾರ ಬಂದಿತ್ತು. ಕಾಸರಗೋ ಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅಗತ್ಯವಿರುವ ೪೦ಕ್ಕೂ ಹೆಚ್ಚು ತಜ್ಞ ವೈದ್ಯಕೀಯ ಅಧ್ಯಾಪಕರು ಮತ್ತು ಅಗತ್ಯದ ಇತರ ಸಿಬ್ಬಂದಿಗಳನ್ನು ಈ ಸರಕಾರ ಈಗಾಗಲೇ ಆಯ್ಕೆ ಮಾಡಿದೆ.

Leave a Reply

Your email address will not be published. Required fields are marked *

You cannot copy content of this page