ಕುಂಬಳೆ ಪೇಟೆಯಲ್ಲಿ ಮೀನು ಮಾರಾಟ: ಇಬ್ಬರ ವಿರುದ್ಧ ಕೇಸು
ಕುಂಬಳೆ: ಕುಂಬಳೆ ಪೇಟೆಯ ಬಸ್ ನಿಲ್ದಾಣ ಬಳಿ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಯಾಗುವ ರೀತಿಯಲ್ಲಿ ಮೀನು ಮಾರಾಟ ನಡೆಸುತ್ತಿದ್ದ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೊಯಿಪ್ಪಾಡಿ ಕಡಪ್ಪುರದ ಸಲೀಂ (೩೮), ಮೊಯ್ದೀನ್ (೪೦) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಇಬ್ಬರು ಪೇಟೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದುದರಿಂದ ತ್ಯಾಜ್ಯ ನೀರು ರಸ್ತೆಗೆ ಹರಿದು ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಯಾಗಿರುವುದಾಗಿ ದೂರಲಾಗಿತ್ತೆನ್ನಲಾಗಿದೆ. ಇದರಿಂದ ಅಲ್ಲಿ ಮೀನು ಮಾರಾಟ ಮಾಡದಂತೆ ಪೊಲೀಸರು ತಾಕೀತು ನೀಡಿದರೂ ನಿರ್ಲಕ್ಷಿಸಿ ಮತ್ತೆ ಮೀನು ಮಾರಾಟ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ವತಃ ಕೇಸು ದಾಖಲಿಸಿಕೊಂಡಿ ರುವುದಾಗಿ ತಿಳಿಸಲಾಗಿದೆ.