ಕುಖ್ಯಾತ ಆರೋಪಿ ಬಾಲಮುರುಗನ್ ಪೊಲೀಸ್ ಕಸ್ಟಡಿಯಿಂದ ಪರಾರಿ

ತೃಶೂರು: ಕುಖ್ಯಾತ ಆರೋಪಿ ಬಾಲಮುರುಗನ್ ಪೊಲೀಸರ ಕಸ್ಟಡಿಯಿಂದ ಪರಾರಿಯಾಗಿದ್ದಾನೆ. ವೀಯೂರ್ ಜೈಲ್ ಪರಿಸರದಿಂದ ಈತ ಓಡಿ ಹೋಗಿದ್ದಾನೆ. ಹಲವಾರು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಈತ ತಮಿಳುನಾಡು ಆಲಂಪುಳಂ ನಿವಾಸಿಯಾಗಿದ್ದಾನೆ. ನಿನ್ನೆ ರಾತ್ರಿ ಈತ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ. ತಮಿಳುನಾಡಿನ ಪೆರಿಯ ನ್ಯಾಯಾಲಯದಲ್ಲಿ ಹಾಜರುಪಡಿಸಿ ತಮಿಳುನಾಡು ಪೊಲೀಸರು ವಾಪಸ್ ಈತನನ್ನು ವೀಯೂರ್ ಜೈಲಿಗೆ ತಲುಪಿಸುತ್ತಿದ್ದ ಮಧ್ಯೆ ಈತ ತಪ್ಪಸಿಕೊಂಡಿದ್ದಾನೆ.

ಬಾಲಮುರುಗನ್‌ನನ್ನು ವ್ಯಾನ್‌ನಲ್ಲಿ ಕುಳ್ಳಿರಿಸಿ  ಆರೋಪಿಯನ್ನು ವಾಪಸ್ ತಂದಿದ್ದೇವೆ ಎಂದು ತಿಳಿಸಲು ಪೊಲೀಸ್ ಅಧಿಕಾರಿಗಳು ಜೈಲಿನೊಳಗೆ ತೆರಳಿದ ಸಂದರ್ಭದಲ್ಲಿ ಆರೋಪಿ ತಪ್ಪಿಸಿಕೊಂಡಿದ್ದಾನೆ. ಬಾಲಮುರುಗನ್‌ನನ್ನು ಬೆನ್ನಟ್ಟಿ ಪೊಲೀಸರು ಓಡಿದರಾದರೂ ಈತನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ೪೦ರಷ್ಟು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಈತ. ಕಳವು ನಡೆಸುವ ವೇಳೆ ವ್ಯಕ್ತಿಗಳಿಗೆ ಆಕ್ರಮಣ ನಡೆಸುವ ಸ್ವಭಾವವೂ ಈತನಿಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿಯಿಂದ ಈತನಿಗಾಗಿ ತೃಶೂರ್ ನಗರದಲ್ಲಿ ವ್ಯಾಪಕ ಹುಡುಕಾಟ ನಡೆಸಲಾಗುತ್ತಿದೆ.

You cannot copy contents of this page