ಕುಡಿದ ಅಮಲಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ಸನ್ನೇ ಚಲಾಯಿಸಿ ಮನೆಗೆ  ಹೋಗಲೆತ್ನಿಸಿದ ಯುವಕ ಸೆರೆ

ಕೊಲ್ಲಂ: ಮನೆಗೆ ಹೋಗಲು ಯಾವುದೇ ಬಸ್ಸು ಸಿಗದಾಗ ರಸ್ತೆ ಬದಿ ನಿಲ್ಲಿಸಿದ್ದ ಕೆಎಸ್‌ಆರ್‌ಟಿಸಿ ಬಸ್ಸೇರಿ ಅದನ್ನು ಸ್ವಯಂ ಚಲಾಯಿಸಿ ಮನೆಗೆ ಹೋಗಲೆತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.  ಕೊಲ್ಲಂ ಪುನಲೂರು ತೇನ್ಮಲ ಉರುಕುನ್ನಿನ ಬಿನೀಶ್ (23) ಬಂಧಿತ ಯುವಕ.  ಲಾರಿ ಚಾಲಕನಾಗಿರುವ ಈತ ಮದ್ಯ ಸೇವಿಸಿ ಅದರ ಅಮಲಿನಲ್ಲಿ   ಮನೆ ಸೇರಲು ಮುಂದಾದಾಗ  ಯಾವುದೇ ಬಸ್ ಲಭಿಸಲಿಲ್ಲ. ಆಗ ಅಲ್ಲೇ ರಾಷ್ಟ್ರೀಯ ಹೆದ್ದಾರಿ ಬಳಿ ನಿಲ್ಲಿಸಲಾಗಿದ್ದ ಕೆಎಸ್‌ಆರ್‌ಟಿಸಿ ಬಸ್ಸೇರಿ  ಅದನ್ನು ಸ್ವಯಂ ಆಗಿ ಸ್ವಯಂ ಆಗಿ ಚಲಾಯಿಸಿ ಮನೆಗೆ ಹೋಗುವ ದಾರಿ ಮಧ್ಯೆ ಪೊಲೀಸರು ಆ ಬಸ್ಸನ್ನು ತಡೆದಾಗ ಬಿನೀಶ್  ಬಸ್ಸಿನಿಂದ ಇಳಿದು ಓಡಿ ಹೋಗಿದ್ದಾನೆ. ಅದನ್ನು ಕಂಡ ಪೊಲೀಸರು ಆತನನ್ನು ಕೊನೆಗೂ ಸೆರೆಹಿಡಿದು ಠಾಣೆಗೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್ ನಾಪತ್ತೆಯಾದ ಬಗ್ಗೆ ಕೆಎಸ್‌ಆರ್‌ಟಿಸಿ ಸ್ಟೇಶನ್ ಮಾಸ್ತರ್ ಇದೇ ವೇಳೆ ಪೊಲೀಸರಿಗೆ ದೂರು ನೀಡಿದ್ದಾರೆ.

You cannot copy contents of this page