ಕುನಿಲ್ ಇಸ್ಲಾಮಿಕ್ ಸೆಂಟರ್ ಮುಹಮ್ಮದಿಯಾ ಕಾಲೇಜಿನ 8ನೇ ವಾರ್ಷಿಕೋತ್ಸವ ಧಾರ್ಮಿಕ ಉಪನ್ಯಾಸ ಆರಂಭ
ಕುಂಬಳೆ: ಬಂದ್ಯೋಡು ಸಮೀ ಪದ ಮುಟ್ಟಂ ಕುನಿಲ್ ಇಸ್ಲಾಮಿಕ್ ಸೆಂಟರ್ ಮುಹಮ್ಮದಿಯಾ ಕಾಲೇಜಿನ 8ನೇ ವಾರ್ಷಿಕೋತ್ಸವ ಹಾಗೂ ಎರಡು ದಿನಗಳ ಧಾರ್ಮಿಕ ಉಪನ್ಯಾಸ ಹಾಗೂ ಮಜ್ಲಿಸ್-ಎ ಸುನ್ನೂರು ನಿನ್ನೆ ಆರಂಭಗೊAಡಿದ್ದು, ಇಂದು ಸಮಾಪ್ತಿಯಾಗಲಿದೆ. ನಿನ್ನೆ ಸಂಜೆ 5ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊAಡಿತು. ಕೆ.ಎಸ್.ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ಉದ್ಘಾಟಿಸಿ ದರು. ಯಾಹ್ಯಾ ತಂಙಳ್ ಅಲ್ ಹಾದಿ ಪ್ರಾರ್ಥನೆಯ ನೇತೃತ್ವ ವಹಿಸಿದರು. ಅಲಿ ಸೈಫುದ್ದೀನ್ ತಂಙಳ್ ಪ್ರಾಸ್ತಾವಿಕ ವಾಗಿ ಭಾಷಣ ಮಾಡಿದರು. ಹಾಫಿಝ್ ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಮುಖ್ಯ ಭಾಷಣ ಮಾಡಿದರು. ಇಂದು ಸಂಜೆ 7:30 ಕ್ಕೆ ಅಲ್ ಮಶ್ಹೂರ್ ಮಜ್ಲಿಸ್-ಎ-ಸುನ್ನೂರ್‌ಗೆ ಹಮ್ದುಲ್ಲಾ ತಂಙಳ್ ಚಾಲನೆ ನೀಡಲಿದ್ದಾರೆ. ಹಾದಿ ತಂಙಳ್ ಅಲ್ ಮಶ್ಹೂರ್ ಸಮÁರೋಪ ಉದಾಟಿಸುವರು. ಹಾರಿಸ್ ತಂಙಳ್ ಅಲ್-ಐದ್ರೋಸಿ ಅಲ್-ಬಾಖವಿ ಮುಟ್ಟಂ ಪ್ರಾರ್ಥನೆ ನಡೆಸುವರು. ಕಬೀರ್ ಫೈಝಿ ಪೆರಿಂಗಡಿ ಪ್ರಾಸ್ತಾವಿಕ ಉಪನ್ಯಾಸ ನೀಡುವÀರು. ಹಾಫಿಝ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರ ಮುಖ್ಯ ಭಾಷಣ ಮಾಡುವರು.