ಕುಸಿದು ಬಿದ್ದ ರಸ್ತೆ ನಾದುರಸ್ತಿ: ಮಜಿಬೈಲ್‌ನಲ್ಲಿ ಸಂಚಾರ ಆತಂಕ

ಮಂಜೇಶ್ವರ: ಕಳೆದ ತಿಂಗಳು ಸುರಿದ ಭಾರೀ ಮಳೆಗೆ ರಸ್ತೆ ಕುಸಿದು ವಾಹನಗಳ ಸಂಚಾರಕ್ಕೆ ತಡೆ ಉಂಟಾಗುತ್ತಿದ್ದರೂ ಅಧಿಕಾರಿಗಳು ಇನ್ನೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದು ವಾಹನ ಸವಾರರಲ್ಲಿ ಭೀತಿ ಹೆಚ್ಚಿಸಿದೆ. ಮೀಂಜ ಪಂಚಾಯತ್ ವ್ಯಾಪ್ತಿಗೊಳಪಟ್ಟ ಲೋಕೋಪಯೋಗಿ ಇಲಾಖೆಯ ಹೊಸಂಗಡಿ-ಮೀಯಪದವು ರಸ್ತೆಯ ಮಜಿಬೈಲ್ ತಿರುವಿನಲ್ಲಿ ರಸ್ತೆ ಕುಸಿದು ಆತಂಕದ ಸ್ಥಿತಿ ಉಂಟಾಗಿದೆ. ಕಳೆದ ತಿಂಗಳು ಸುರಿದ ಭಾರೀ ಮಳೆಗೆ ರಸ್ತೆಯ ಒಂದು ಬದಿ ಕುಸಿದು ಬಿದ್ದಿದ್ದು, ಬಳಿಕ ಅಡಿಭಾಗದ ಮಣ್ಣು ಕೊರೆದು ಈಗ ಅರ್ಧರಸ್ತೆ ಕುಸಿದು ಹೋಗಿ ಬಸ್ ಸಹಿತ ಇತರ ದೊಡ್ಡ ವಾಹನಗಳಿಗೆ ಸಂಚಾರ ಅಸಾಧ್ಯವಾಗಿದೆ. ಇನ್ನಷ್ಟು ಕುಸಿದು ಬಿದ್ದಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಮೊಟಕುಗೊಳ್ಳಲಿದೆ. ಈ ಹಿಂದೆಯೇ ಸ್ಥಳಕ್ಕೆ ಅಧಿಕಾರಿಗಳು ತಲುಪಿ ಪರಿಶೀಲಿಸಿ ಅಪಾಯ ಸೂಚನೆಯ ನಾಮಫಲಕವನ್ನು ಮಾತ್ರ ಇಟ್ಟು ಹೋಗಿದ್ದು, ದುರಸ್ತಿಗೊಳಿಸಲು ಮುಂದಾಗಲಿಲ್ಲವೆAದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯಲ್ಲಿ ರೂಪುಗೊಂಡ ಬೃಹತ್ ಹೊಂಡದ ಪರಿಸರದಲ್ಲಿ ಭದ್ರತೆ ಮಾಡದ ಹಿನ್ನೆಲೆಯಲ್ಲಿ ರಾತ್ರಿ ಕಾಲದ ವಾಹನಗಳು ಹೊಂಡ ಗಮನಕ್ಕೆ ಬಾರದೆ ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸಬಹುದಾಗಿದೆ. ಸಂಬAಧ ಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page