ಬಸ್ ಪ್ರಯಾಣ ವೇಳೆ ಹೃದಯಾಘಾತ: ಚಿಗುರುಪಾದೆ ನಿವಾಸಿ ನಿಧನ

ಮಂಜೇಶ್ವರ: ಬಸ್ ಪ್ರಯಾಣ ವೇಳೆ ಹೃದಯಾಘಾತ ಉಂಟಾಗಿ ವ್ಯಕ್ತಿಯೋರ್ವರು ನಿಧನ ಹೊಂದಿದ ಘಟನೆ ನಡೆದಿದೆ. ಚೇವಾರು ನಿವಾಸಿ, ಚಿಗುರುಪಾದೆ ಬಾಡಿಗೆ ಕ್ವಾಟರ್ಸ್ನಲ್ಲಿ ವಾಸವಾಗಿರುವ ಮೊಹಮ್ಮದ್ (65) ಎಂಬವರು ನಿಧನ ಹೊಂದಿದ್ದಾರೆ. ನಿನ್ನೆ ಮಧ್ಯಾಹ್ನ ಇವರು ಉಪ್ಪಳದಿಂದ ಖಾಸಗಿ ಬಸ್‌ನಲ್ಲಿ ಹೊಸಂಗಡಿಗೆ ಪ್ರಯಾಣಿ ಸುತ್ತಿರುವ ವೇಳೆ ಹೃದಯಾಘಾತ ಉಂಟಾಗಿತ್ತೆನ್ನಲಾಗಿದೆ. ಕೂಡಲೇ ಇತರ ಪ್ರಯಾಣಿಕರನ್ನು ಇಳಿಸಿ ಬಸ್ ಸಿಬ್ಬಂದಿಗಳು ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ವೈದ್ಯರು ತಪಾಸಣೆ ನಡೆಸಿದಾಗ ನಿಧನ ಹೊಂದಿದ್ದರು. ಮೃತರು ಪತ್ನಿ ಕದೀಜಮ್ಮ, ಮಕ್ಕಳಾದ ಅಬ್ದುಲ್ ಮಜೀದ್, ಮಸ್‌ಬೀನ, ಸೊಸೆ ತಾಹಿರ, ಇಬ್ಬರು ಸಹೋದರರು, ಮೂರು ಮಂದಿ ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಉಪ್ಪಳ ಪೇಟೆಯ ಜುಮಾ ಮಸೀದಿಯಲ್ಲಿ ನಿನ್ನೆ ರಾತ್ರಿ ಅಂತ್ಯಸAಸ್ಕಾರ ನಡೆಯಿತು.

RELATED NEWS

You cannot copy contents of this page