ಕೆಎಸ್‌ಇಬಿ ಕಚೇರಿಗೆ ನುಗ್ಗಿ ನಗ್ನತೆ ಪ್ರದರ್ಶನ: ಕರಾರು ನೌಕರನ ವಿರುದ್ಧ ಕೇಸು

ಕಾಸರಗೋಡು: ಕೆಎಸ್‌ಇಬಿ ಕಚೇರಿಗೆ ನುಗ್ಗಿ ನಗ್ನತೆ ಪ್ರದರ್ಶಿಸಿ ಅಶ್ಲೀಲ ಭಾಷೆಯಲ್ಲಿ ಬೈಗುಳದ ಸುರಿಮಳೆಗೈದಿರುವುದಾಗಿ ದೂರಲಾಗಿದೆ. ವರ್ಕಾಡಿ ಸೆಕ್ಷನ್ ಇಂಜಿನಿಯರ್, ಎಂ.ಪಿ. ಸಂದೀಪ್‌ರ ದೂರಿ ನಂತೆ ಕರಾರು ನೌಕರ ಜಯ ರಾಜ್ ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಸೋಮವಾರ ಸಂಜೆ ೬ ಗಂಟೆಗೆ ಪ್ರಕರಣಕ್ಕೆ ಆಸ್ಪದ ವಾದ ಘಟನೆ ಸಂಭವಿಸಿದೆ. ಮದ್ಯದಮಲಿನಲ್ಲಿ ಕಚೇರಿಗೆ ತಲುಪಿದ ಕರಾರು ನೌಕರ ಜಯರಾಜ್ ನನ್ನನ್ನು ಹಾಗೂ ಉಳಿದ ಸ್ಟಾಫ್‌ಗಳನ್ನು ಅಶ್ಲೀಲ ಭಾಷೆಯಲ್ಲಿ ಬೈದಿದ್ದು ಬಳಿಕ ನಗ್ನತೆ ಪ್ರದರ್ಶಿಸಿ ಹಲ್ಲೆಗೈಯ್ಯುವುದಾಗಿ ಬೆದರಿಕೆ ಒಡ್ಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page