ಕೇರಳದಲ್ಲಿ ಸಿಪಿಎಂ ಸ್ಥಿತಿ ಗಂಭೀರ : ಅಧ್ಯಯನ ನಡೆಸಬೇಕಾಗಿದೆ- ಪಿ.ಬಿ.ಸಭೆ
ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಭಾರೀ ಸೋಲು ಅನುಭವಿಸಿದ ಸಿಪಿಎಂನ ಸ್ಥಿತಿ ಅತೀ ಗಂಭೀರವಾಗಿದೆಯೆಂದು ಸಿಪಿಎಂ ಪಾಲಿಟ್ ಬ್ಯೂರೋ ಸಭೆ ಅಭಿಪ್ರಾಯಪಟ್ಟಿದೆ. ಕೇರಳದಲ್ಲಿ ಪಕ್ಷದ ಸೋಲಿನ ಕುರಿತು ಅಧ್ಯಯನ ನಡೆಸಬೇಕಾದ ಅಗತ್ಯವಿದೆಯೆಂದೂ ನೇತಾರರು ಒತ್ತಾಯಿಸಿದ್ದಾರೆ.
ಸಿಪಿಎಂನ ಭದ್ರಕೋಟೆಯಲ್ಲೂ ಬಿಜೆಪಿ ಬೆಳೆಯುತ್ತಿದೆ. ಸಿಪಿಎಂಗೆ ಸ್ವಾಧೀನವುಳ್ಳ ಹಲವು ಮತಗಟ್ಟೆಗಳಲ್ಲೂ ಬಿಜೆಪಿಯ ಮತ ಹೆಚ್ಚಳವಾಗಿದೆ. ಕೇರಳದಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸಿ ಕೊಂಡಿ ರುವುದನ್ನು ತಿಳಿಯಲು ಸಾಧ್ಯವಾಗದಿರುವುದಕ್ಕೆ ಕಾರಣ ವೇನೆಂದು ಪಿ.ಬಿ. ಪ್ರಶ್ನಿಸಿದೆ. ಕೇರಳ ದಲ್ಲಿ ಸಿಪಿಎಂ ವಿರುದ್ಧ ಜನರ ನಿಲುವು ಬದಲಾಗಿದೆ. ಅದನ್ನು ತಿಳಿದುಕೊಳ್ಳಲು ಕೆಳಮಟ್ಟದ ಸಮಿತಿಗಳಿಗೆ ಯಾಕೆ ಸಾಧ್ಯವಾಗಿಲ್ಲ ವೆಂದು ಅಧ್ಯಯನ ನಡೆಸಬೇಕಾಗಿದೆ. ಲೋಕಸಭಾ ಚುನಾವಣೆಯಲ್ಲಿ ನಿರಂತರ ಎರಡನೇ ಬಾರಿಗೆ ಸಿಪಿಎಂಗೆ ತಿರುಗೇಟುಂಟಾಗಿದೆಯೆಂದೂ ಪಿ.ಬಿ. ಸಭೆ ಅಭಿಪ್ರಾಯಪಟ್ಟಿದೆ.