ಕೈಕಂಬ- ಬಾಯಾರು ರಸ್ತೆಯಲ್ಲಿ ಹಂಪ್ಗಳಿಂದಲೇ ಅಪಘಾತ ಭೀತಿ
ಉಪ್ಪಳ: ವೇಗವನ್ನು ನಿಯಂತ್ರಿಸಿ ಅಪಘಾತಗಳನ್ನು ಕಡಿಮೆ ಮಾಡಿ ಜೀವಹಾನಿ ಆತಂಕವನ್ನು ಕಡಿಮೆ ಗೊಳಿಸಲು ರಸ್ತೆಗಳಲ್ಲಿ ಹಂಪ್ಗಳನ್ನು ಸ್ಥಾಪಿಸಲಾಗುತ್ತದೆ. ಆದರೆ ಕೈಕಂಬ- ಬಾಯಾರು ರಸ್ತೆಯಲ್ಲಿ ಹಂಪ್ಗಳೇ ಅಪಘಾತ ಬೆದರಿಕೆ ಸೃಷ್ಟಿಸುತ್ತಿರುವುದು ವಿಪರ್ಯಾಸವಾಗಿದೆ. ಕೈಕಂಬದಿಂದ ಮುಳಿಗದ್ದೆಗೆ 16 ಕಿಲೋ ಮೀಟರ್ ಇದ್ದು ಈ ಮದ್ಯೆ 17 ಹಂಪ್ಗಳನ್ನು ಸ್ಥಾಪಿಸಲಾಗಿದೆ. ಇದು ಕೆಲವು ಕಡೆಗಳಲ್ಲಿ ಇಳಿಜಾರಿನಲ್ಲಿದ್ದು, ಕೆಲವು ಕಡೆಗಳಲ್ಲಿ ಹಂಪ್ ಇದೆ ಎಂಬುವುದೇ ತಿಳಿಯ ದಂತಿದೆ. ಇದರಿಂದಾಗಿ ಅಪಘಾತಕ್ಕೆ ಹಂಪ್ ಕಾರಣವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಮೊದಲು ರಸ್ತೆಯಲ್ಲಿ ಅಪಘಾತ ವಲಯಗಳಲ್ಲಿ ಹಂಪ್ಗಳನ್ನು ಸ್ಥಾಪಿಸಲಾಗಿತ್ತು. ಆದರೆ ರಸ್ತೆ ಅಭಿವೃದ್ಧಿಗೊಂಡು ಡಾಮರೀಕರಣ ಮುಗಿಸಿದಾಗ 17 ಹಂಪ್ಗಳನ್ನೂ ಸ್ಥಾಪಿಸಲಾಗಿದೆ. ರಾತ್ರಿ ವೇಳೆ ಹಂಪ್ ಗಳು ಚಾಲಕರ ಗಮನಕ್ಕೆ ಬಾರದೆ ಬಹಳಷ್ಟು ಅಪಾಯ ಉಂಟಾಗು ತ್ತಿದೆ. ಬಸ್ ಸಹಿತ ವಿವಿಧ ವಾಹನ ಗಳು ಹಂಪ್ಗಳಲ್ಲಿ ಹತ್ತಿ ಇಳಿದು ಸಾಗಬೇಕಾಗುತ್ತಿದ್ದು, ಪ್ರಯಾಣ ಸಮಯ ಕೂಡಾ ನಷ್ಟವಾಗಲು ಕಾರಣವಾಗುತ್ತಿದೆ ಎಂದು ವಾಹನ ಚಾಲಕರು ದೂರಿದ್ದಾರೆ. ಈ ಹಿನ್ನೆಲೆ ಯಲ್ಲಿ ಅಪಘಾತ ವಲಯಗಳಲ್ಲಿ ಶಾಲೆಗಳು ಇರುವ ಸ್ಥಳದಲ್ಲಿ ಹಾಗೂ ಅಗತ್ಯ ಸ್ಥಳಗಳಲ್ಲಿ ಮಾತ್ರವೇ ಹಂಪ್ಗಳನ್ನುಉಳಿಸಿ ಇತರ ಹಂಪ್ಗಳನ್ನು ತೆಗೆಯಬೇಕೆಂದು ವಾಹನ ಚಾಲಕರು ಆಗ್ರಹಿಸಿದ್ದಾರೆ.