ಕೊಲೆಯತ್ನ ಪ್ರಕರಣ: ನಾಲ್ವರ ಬಂಧನ
ಕಾಸರಗೋಡು: ಕೊಲೆಯತ್ನ ಪ್ರಕರಣದ ನಾಲ್ವರು ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಕೂಡ್ಲು ವಿವೇಕಾನಂದ ನಗರ ಕಮಲ ನಿಲಯದ ಸುನಿಲ್ ಕುಮಾರ್ ಆರ್.(29), ಕೂಡ್ಲು ಎನ್.ಎಂ. ಕಂಪೌಂಡ್ ಶಿವಕೃಷ್ಣ ನಿಲಯದ ಹರೀಶ್ ಪಿ. (35), ಕೂಡ್ಲು ವಿವೇಕಾನಂದ ನಗರ ಶಾಸ್ತಾ ನಿಲಯದ ವಿಶ್ವಾಸ್ ಕೆ. (37) ಮತ್ತು ಆತೀಷ್ ಕೆ. (38) ಬಂಧಿತ ಆರೋಪಿಗಳಾಗಿದ್ದಾರೆ.
ಕೂಡ್ಲು ಮನ್ನಿಪ್ಪಾಡಿ ಡಿಎಸ್‌ಸಿ ಮೈದಾನ ಬಳಿಯ ಅಂಗಡಿಯೊಂದರ ಬಳಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪದಂತೆ ಈ ನಾಲ್ವರ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ನಂತರ ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.