ಗುಜರಾತ್‌ನಲ್ಲಿ ಭಾರೀ ಭೂಕಂಪ

ಅಹಮದಾಬಾದ್: ಉತ್ತರ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ವಾವ್ ಬಳಿ ಇಂದು ಮುಂಜಾನೆ 3.35ಕ್ಕೆ ಭೂಕಂಪ ಸಂಭವಿಸಿದೆಯೆಂದು ಭೂಕಂಪ ಶಾಸ್ತ್ರ ಸಂಶೋಧನಾ ಸಂಸ್ಥೆ ತಿಳಿಸಿದೆ.  ವಾವ್‌ನಿಂದ 27 ಕಿ.ಮೀ. ದೂರದಲ್ಲಿ 4.9 ಕಿ.ಮೀ ಆಳದಲ್ಲಿ ಭೂಕಂಪ ದಾಖಲಾಗಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಗುಜರಾತ್ ಅತೀ ಹೆಚ್ಚಿನ ಭೂಕಂಪ-ಅಪಾಯ ಪ್ರದೇಶವಾಗಿದ್ದು, ಕಳೆದ 200 ವರ್ಷಗಳಲ್ಲಿ 9ಪ್ರಮುಖ ಭೂಕಂಪಗಳಿಗೆ ಈ ಪ್ರದೇಶ ತುತ್ತಾಗಿದೆಯೆಂದು ಸಂಬಂಧಪಟ್ಟ  ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page