ಗುಜರಾತ್ನಲ್ಲಿ ಸಿಡಿಲು ಬಡಿದು ೨೦ ಮಂದಿ ಸಾವು
ಕಚ್: ಗುಜರಾತ್ನಲ್ಲಿ ನಿನ್ನೆಯಿಂದ ಸುರಿಯಲಾರಂಭಿಸಿದ ಅಕಾಲಿಕ ಮಳೆ ಮತ್ತು ಸಿಡಿಲು ಬಡಿದು ಕನಿಷ್ಠ ೨೦ ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ. ಹಲವು ಪ್ರದೇಶಗಳ ಮನೆಗಳು ಮತ್ತು ಬೆಳೆಗಳಿಗೂ ಬಾರೀ ಹಾನಿ ಉಂಟಾಗಿದೆಯೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸಂತೃಸ್ಥರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಸ್ಥಳೀಯ ಆಡಳಿತವು ಅಗತ್ಯದ ಪರಿಹಾರ ಕಾರ್ಯಗಳಲ್ಲೂ ತೊಡಗಿದೆ.
ಗುಜರಾತ್ನ ೨೫೨ ತಾಲೂಕುಗಳ ಪೈಕಿ ೨೩೪ ತಾಲೂಕುಗಳಲ್ಲಿ ನಿನ್ನೆಯಿಂದ ಬಾರೀ ಮಳೆ ಸುರಿಯಲಾರಂಭಿಸಿದೆ. ಇದರ ಜತೆಗೆ ಸಿಡಿಲು ಹಾಗೂ ಮಿಂಚು ಕೂಡಾ ಬಡಿಯತೊಡಗಿದ್ದು, ಅದುವೇ ಸಾವು ನೋವು ಮತ್ತು ನಾಶನಷ್ಟ ಉಂಟಾಗಲು ಕಾರಣವಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರ (ಎಸ್ಇಒಸಿ) ತಿಳಿಸಿದೆ.
ಗುಜರಾತ್ನಸೂರತ್, ಸುರೇಂದ್ರನಗರ, ಖೇಡಾ, ತಾಪಿ, ಭರೂಚ್ ಮತ್ತು ಅಮ್ರೇಲಿ ಜಿಲ್ಲೆಗಳಲ್ಲಿ ವಿಶೇಷವಾಗಿ ಭಾರೀ ಮಲೆ ಉಂಟಾಗಿದೆ. ಭಾರೀ ಸಿಡಿಲು ಮಿಂಚು ಕೂಡಾ ಬಡಿದಿದೆ. ಕೇವಲ ೧೬ ಗಂಟೆಗಳಲ್ಲಿ ೫೦ರಿಂದ ೧೧೭ ಮಿ.ಮೀ ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.