ಗುಡ್ಡೆಯಿಂದ ಮಣ್ಣು ಅಗೆದು ಸಾಗಾಟ ದಂಧೆ ವ್ಯಾಪಕ

ಕಾಸರಗೋಡು: ಮಡಿಕೈ ಕೊರಂಙನಾಡಿ ಎಂಬಲ್ಲಿ ಗುಡ್ಡೆ ಅಗೆದು ಭಾರೀ ಪ್ರಮಾಣದಲ್ಲಿ ಮಣ್ಣು ಸಾಗಾಟ ನಡೆಸುವುದನ್ನು ಪತ್ತೆಹಚ್ಚ ಲಾಗಿದೆ. ನಾಗರಿಕರು ನೀಡಿದ ಮಾಹಿತಿ ಮೇರೆಗೆ ಹೊಸದುರ್ಗ ಡಿವೈಎಸ್‌ಪಿ ಬಾಬು ಪೆರಿಂಙೋ ತ್‌ರ ನೇತೃತ್ವದಲ್ಲಿ ನಿನ್ನೆ ನಡೆಸಿದ ಪರಿಶೀಲನೆ ವೇಳೆ  ಭಾರೀ ಪ್ರಮಾಣದ ಮಣ್ಣು ಕೊಳ್ಳೆಯನ್ನು ಪತ್ತೆಹಚ್ಚಿದ್ದಾರೆ. ಕೊರಂಙನಾಡಿ ಯುವಶಕ್ತಿ ಕ್ಲಬ್‌ನ ಸಮೀಪದಲ್ಲಿರುವ  ಸ್ಥಳದಿಂದ ಅಪಾಯಕಾರಿ ರೀತಿ ಯಲ್ಲಿ ಮಣ್ಣು ಅಗೆದು ಸಾಗಿಸ ಲಾಗಿದೆ. ಮುಂಜಾನೆ ಹೊತ್ತಿನಲ್ಲಿ ಆರಂಭಗೊಳ್ಳುವ ಮಣ್ಣು ಅಗೆಯುವ ಕೆಲಸ ರಾತ್ರಿ ವರೆಗೆ ಮುಂದುವ ರಿಯುತ್ತಿರುವುದಾಗಿ ಹೇಳಲಾಗುತ್ತಿದೆ. ಅನಧಿಕೃತವಾಗಿ ಮಣ್ಣು ಅಗೆದು ಸಾಗಿಸುತ್ತಿರುವ ಕುರಿತು ನಾಗರಿಕರು ಅಧಿಕಾರಿಗಳಿಗೆ ದೂರು ನೀಡಿದ್ದರೂ ಅವರು ಸ್ಥಳ ಸಂದರ್ಶಿಸಲು ಸಿದ್ಧವಾಗಲಿಲ್ಲ ಎಂಬ ಆರೋಪ ವುಂಟಾಗಿದೆ. ಅನಧಿಕೃತವಾಗಿ ಮಣ್ಣು ಅಗೆದು ಸಾಗಿಸುವುದರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳು ವುದಾಗಿ ಡಿವೈಎಸ್‌ಪಿ ತಿಳಿಸಿದ್ದಾರೆ.

RELATED NEWS

You cannot copy contents of this page