ಚಂದ್ರನ ಕಕ್ಷೆ ತಲುಪಿದ ಬಾಹ್ಯಾಕಾಶ ನೌಕೆ
ಬೆಂಗಳೂರು: ಚಂದ್ರನತ್ತ ೪೦ ದಿನಗಳ ಪ್ರಯಾಣದಲ್ಲಿ ೩೧ ದಿನಗಳನ್ನು ಪೂರ್ಮಗೊಳಿಸಿರುವ ಇಸ್ರೋದ ಚಂದ್ರಯಾನ-೩ ಬಾಹ್ಯಾಕಾಶ ನೌಕೆ ಚಂದ್ರನ ವೃತ್ತಾಕಾರದ ಕಕ್ಷೆಗೆ (ಮೇಲ್ಮೈ) ತಲುಪಿದೆ.ಇಂದು ಬೆಳಿಗ್ಗೆ ನಾಲ್ಕನೇ ಬಾರಿಗೆ ದೂರವನ್ನು ಮತ್ತಷ್ಟು ಕಡಿಮೆ ಮಾಡಿ ಚಂದ್ರನ ೧೦೦ ಕಿ.ಮಿ. ಸನಿಹಕ್ಷೆ ತಲುಪಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಇಂದು ಬೆಳಿಗ್ಗೆ ೮.೩೦ಕ್ಕೆ ನಡೆಸಿದ ನಿಖರವಾದ ಕುಶಲತೆಯು ೧೦೦ ಕಿ.ಮೀ. ವೃತ್ತಾಕಾರದ ಕಕ್ಷೆಯನ್ನು ನೌಕೆ ಪ್ರವೇಶಿಸಿದೆ. ಮೂಲಕ ವೃತ್ತಾಕಾರದ ಹಂತಕ್ಕೆ ಚಾಲನೆ ನೀಡಲಾಗಿದೆ ಎಂದು ಇಸ್ರೋ ತಿಳಿಸಿದೆ. ಚಂದ್ರಯಾನ-೩ನ ಇಸ್ರೋದ ಬಾಹ್ಯಾಕಾ ನೌಕೆಯ ಉಡಾವಣೆ ಜುಲೈ ೧೪ರಂದು ನಡೆಸಲಾಗಿದೆ. ಚಂದ್ರಯಾನ- ೩ ಜುಲೈ ೧೫ ಮತ್ತು ೨೫ರ ನಡುವೆ ಭೂಮಿಗೆ ಸಂಬಂಧಿಸಿದ ಐದು ಕುಶಲತೆಗಳನ್ನು ಪೂರ್ಣಗೊಳಿಸಿದೆ. ಇದು ಅಪೂಜಿಯಲ್ಲಿ (ಭೂಮಿಯಿಂದ ಅತ್ಯಂತ ದೂರದ ಬಿಂದು) ತನ್ನ ಎತ್ತರವನ್ನು ೧.೨ ಲಕ್ಷ ಕಿ.ಮೀ.ಗಿಂತ ಹೆಚ್ಚು ಎತ್ತರಕ್ಕೆ ಏರಿಸಿದೆ. ಆಗಸ್ಟ್ ೧ರಂದು ಟ್ರಾನ್ಸ್ ಲೂನಾರ್ ಇಂಜೆಕ್ಷನ್ (ಟಿಎಲ್‌ಐ) ಚಂದ್ರನ ಕಕ್ಷೆಯನ್ನು ಸೇರಿಸುವ ಮೊದಲು ಸುಮಾರು ೩.೬ ಲಕ್ಷ ಕಿ.ಮೀ. ಎತ್ತರದಲ್ಲಿ ಚಂದ್ರನ ಕಡೆಗೆ ಪಥ ಇರಸಿದೆ. ಚಂದ್ರಯಾನ-೩ ಬಾಹ್ಯಾಕಾಶ ನೌಕೆ ಹೊತ್ತ ರೋವರ್ ಆಗಸ್ಟ್ ೨೩ರಂದು ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯಲಿದೆ. ಈ ಕೊನೆಯ ಹಂತದ ಪ್ರಕ್ರಿಯೆ ಅತ್ಯಂತ ಕಠಿಣವೂ ಆಗಲಿದೆ. ಇದು ಯಶಸ್ವಿಯಾದರೆ ಚಂದ್ರನ ಮೇಲೆ ರೋವರ್ ಇಳಿಸಿದ ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.