ಚೊಚ್ಚಲ ಸ್ಪರ್ಧೆಯಲ್ಲಿ ಭಾರೀ ಬಹುಮತ: ಪ್ರಿಯಾಂಕಾ ಗಾಂಧಿ ಈ ವಾರ ಪ್ರಮಾಣವಚನ ಸ್ವೀಕಾರ
ಹೊಸದಿಲ್ಲಿ: ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ನೇತಾರೆ ಪ್ರಿಯಾಂಕಾ ಗಾಂಧಿ ಈ ವಾರ ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಗೆಲುವು ಸಾಧಿಸಿದುದರ ಪ್ರಮಾಣ ಪತ್ರಗಳೊಂದಿಗೆ ಕಾಂಗ್ರೆಸ್ ನೇತಾರರಾದ ಟಿ. ಸಿದ್ದಿಕ್, ಐ.ಸಿ. ಬಾಲಕೃಷ್ಣನ್, ಎ.ಪಿ. ಅನಿಲ್ ಕುಮಾರ್ ಇಂದು ದೆಹಲಿಗೆ ತೆರಳಿ ಅದನ್ನು ಪ್ರಿಯಾಂಕಾ ಗಾಂಧಿಗೆ ಹಸ್ತಾಂತರಿಸುವರು. ಪ್ರಮಾಣಪತ್ರ ಹಾಜರುಪಡಿಸಿದ ಬಳಿಕ ಲೋಕಸಭಾ ಸೆಕ್ರೆಟರಿಯೇಟ್ ಮುಂದಿನ ಪ್ರಮಾಣವಚನಕ್ಕಿರುವ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ಬುಧವಾರ ಅಥವಾ ಗುರುವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಮೊದಲ ಸಭೆಯಲ್ಲೇ ಪ್ರಿಯಾಂಕಾ ಗಾಂಧಿ 4,10,931 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಒಟ್ಟು 9,52,543 ಮಂದಿ ಮತ ಚಲಾಯಿ ಸಿದ್ದರು. ಈ ಪೈಕಿ 6,22,338 ಮತಗಳು ಪ್ರಿಯಾಂಕರಿಗೆ ಲಭಿಸಿದೆ. ಇದು ಮತದಾನವಾದ ಮತದ 65.3 ಶೇಕಡಾವಾಗಿದೆ. ಎನ್ಡಿಎ ಅಭ್ಯರ್ಥಿ ಬಿಜೆಪಿಯ ನವ್ಯ ಹರಿದಾಸ್ರಿಗೆ 1,09,939 ಮತಗಳು, ಎಡರಂಗ ಅಭ್ಯರ್ಥಿ ಸಿಪಿಐಯ ಸತ್ಯನ್ ಮೊಕೇರಿಗೆ 2,11,407 ಮತಗಳು ಲಭಿಸಿತ್ತು.