ಜಗ್‌ದೀಪ್ ಧನ್ಕರ್ ರಾಜೀನಾಮೆ ಹಿನ್ನೆಲೆ: ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಆರಂಭಿಸಿದ ಚುನಾವಣಾ ಆಯೋಗ

ನವದೆಹಲಿ:  ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ರಾಜೀ ನಾಮೆ ನೀಡಿದ ಬೆನ್ನಲ್ಲೇ  ಕೇಂದ್ರ ಚುನಾವಣಾ ಆಯೋಗ    ಉಪ ರಾಷ್ಟ್ರಪತಿ  ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಮೂಲಗಳ ಪ್ರಕಾರ ಕೇಂದ್ರ ಚುನಾವಣಾ ಆಯೋಗ ಮುಂದಿನ 48ರಿಂದ 72 ಗಂಟೆಗಳಲ್ಲಿ ಉಪರಾಷ್ಟ್ರಪತಿ  ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಿದೆ. ಅಗೋಸ್ತ್ ಕೊನೆಯ ವಾರದೊಳಗೆ ನೂತನ ಉಪರಾಷ್ಟ್ರಪತಿ ಆಯ್ಕೆಯಾಗುವ ನಿರೀಕ್ಷೆ ಇದೆ. ಜಗದೀಪ್ ಧನ್ಕರ್‌ರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ಸಂಜೆ ಔಪಚಾರಿಕವಾಗಿ ಅಂಗೀಕರಿಸಿದ್ದಾರೆ. ಜಗದೀಪ್‌ರ ಅಧಿಕಾರಾವಧಿ ಮುಗಿಯಲು ಇನ್ನೂ ಎರಡು ವರ್ಷಬಾಕಿ ಇರುವಂತೆಯೇ  ಎರಡು ದಿನಗಳ ಹಿಂದೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೆ ಅನಾರೋಗ್ಯ ಕಾರಣವನ್ನು ಅವರು ನೀಡಿದ್ದಾರೆ.

ಸಂವಿಧಾನದ 68(2) ವಿಧಿಯ ಪ್ರಕಾರ ರಾಜೀನಾಮೆ ಸಂದರ್ಭದಲ್ಲಿ ಉಪರಾಷ್ಟ್ರಪತಿ  ಚುನಾವಣೆಯನ್ನು ನಡೆಸಲು ಯಾವುದೇ ನಿಗದಿತ ಸಮಯ ಇರುವುದಿಲ್ಲ. ಆದರೆ  ಚುನಾವಣೆಯನ್ನು  ಸಾಧ್ಯವಾದಷ್ಟು ಬೇಗ ನಡೆಸಬೇಕೆಂದು ನಿಬಂಧನೆ ಯಿದೆ. ಇದರಿಂದಾಗಿ ಚುನಾವಣೆಯ ಅಗತ್ಯವನ್ನು ಸೂಚಿಸುವ ಔಪಚಾರಿಕ ಅಧಿಸೂಚನೆ ಮುಂದಿನ ಮೂರು ದಿನಗಳೊಳಗಾಗಿ ಚುನಾವಣಾ ಆಯೋಗ ಹೊರಡಿಸುವ ಸಾಧ್ಯತೆ ಇದೆ.

1952ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆಯ ಪ್ರಕಾರ ಅಧಿಸೂಚನೆ ಹೊರಡಿಸಿದೆ.  ನಂತರ ನಾಮಪತ್ರಗಳ ಪರಿಶೀಲನೆ, ಹಿಂತೆಗೆಯುವಿಕೆ, ಮತದಾನ ಮತ್ತು ಎಣಿಕೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಗರಿಷ್ಠ 32 ದಿನಗಳೊಳಗೆ ಪೂರ್ಣಗೊಳಿಸ ಬೇಕು. ಅದರಂತೆ ಭಾರತದ ಮುಂದಿನ ಉಪರಾಷ್ಟ್ರಪತಿಯ ಆಯ್ಕೆ ಅಗೋಸ್ತ್  ಅಂತ್ಯದೊಳ ಗಾಗಿ ನಡೆಯುವ ನಿರೀಕ್ಷೆಯಿದೆ.  ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಉಪರಾಷ್ಟ್ರ ಪತಿಯನ್ನು ಆಯ್ಕೆ ಮಾಡುತ್ತಾರೆ.  ಮೇಲ್ಮನೆಗೆ ನಾಮ ನಿರ್ದೇಶಿತ ಸದಸ್ಯರು  ಮತ ಚಲಾಯಿಸಲು ಅರ್ಹರಾಗುತ್ತಾರೆ. ಲೋಕಸಭೆಯಲ್ಲಿ ಆಡಳಿತ ಒಕ್ಕೂಟ ವಾದ ಎನ್‌ಡಿಎ-273 ಮತ್ತು ರಾಜ್ಯ ಸಭೆಯಲ್ಲಿ 133 ಸದಸ್ಯರ ಬಲ ಹೊಂದಿದೆ. ಇದರಿಂದಾಗಿ ಎನ್‌ಡಿಎ ಬೆಂಬಲಿತ  ಉಪರಾಷ್ಟ್ರಪತಿ ಅಭ್ಯರ್ಥಿ ಯ ಗೆಲುವಿಗೆ ಇಷ್ಟು ಸದಸ್ಯರ ಸಂಖ್ಯೆ ಸಾಕಾಗಬಹುದು.

Leave a Reply

Your email address will not be published. Required fields are marked *

You cannot copy content of this page