ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕ್‌ನಿಂದ ಗುಂಡಿನ ದಾಳಿ

ದಿಲ್ಲಿ: ಜಮ್ಮು ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಮತ್ತೆ ಕೆಣಕಲು ಬಂದಿದ್ದು ಇದಕ್ಕೆ ಭಾರತೀಯ ಸೇನೆ ಸೂಕ್ತ ತಿರುಗೇಟು ನೀಡಿದೆ.

ನಿನ್ನೆ ರಾತ್ರಿ ಜಮ್ಮು ಕಾಶ್ಮೀರದ ಆರ್ಣಿಯ ಎಂಬಲ್ಲಿ ಭಾರತೀಯ ಯೋಧರ ಮೇಲೆ ಪಾಕ್ ಸೇನೆ ಗುಂಡು ಹಾರಿಸಿದೆ. ತಕ್ಷಣ ಭಾರತೀಯ ಸೇನೆ ಕೂಡಾ ತಿರುಗೇಟು ನೀಡಿದೆ. ಎರಡೂ ಭಾಗದಿಂದ ಆಕ್ರಮಣ ಪ್ರತ್ಯಾಕ್ರಮಣ ಇಂದು ಮುಂಜಾನೆ ೩ ಗಂಟೆವರೆಗೆ ಮುಂದುವರಿದಿದೆ. ಪಾಕಿಸ್ತಾನ ಸೇನೆ ಮೋಟಾರ್ ಶೆಲ್‌ಗಳನ್ನು ಬಳಸಿ ಆಕ್ರಮಿಸಿದೆಯೆಂದು ಬಿಎಸ್‌ಎಫ್ ತಿಳಿಸಿದೆ. ಪಾಕಿಸ್ತಾನದ ಆಕ್ರಮಣದಿಂದ ಪ್ರದೇಶದ ಹಲವು ಮನೆಗಳಿಗೆ ಹಾನಿಯುಂಟಾಗಿರುವುದಾಗಿ ಹೇಳಲಾಗುತ್ತಿದೆ. ಇದೇ ವೇಳೆ ಕುಪ್ಪಾರ ಸೆಕ್ಟರ್‌ನಲ್ಲಿ ಉಗ್ರರು ಅವಿತುಕೊಂಡಿರುವ ಬಗ್ಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಅವರಿಗಾಗಿ ಶೋಧ ಮುಂದುವರಿಸದೆ.

RELATED NEWS

You cannot copy contents of this page