ಜಿಲ್ಲಾ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳ: ದಯಾಮರಣ ನೀಡಬೇಕೆಂದು ಮಹಿಳಾ ನ್ಯಾಯಾಧೀಶೆಯ ಬೇಡಿಕೆ; ವರದಿ ಕೇಳಿದ ಚೀಫ್ ಜಸ್ಟೀಸ್
ಹೊಸದಿಲ್ಲಿ: ಜಿಲ್ಲಾ ನ್ಯಾಯಾ ಧೀಶ ಲೈಂಗಿಕ ಕಿರುಕಳ ನಡೆಸಿದ್ದಾ ರೆಂದು ತಿಳಿಸಿ ಮಹಿಳಾ ನ್ಯಾಯಾ ಧೀಶೆ ಯೊಬ್ಬರು ಸುಪ್ರೀಂಕೋ ರ್ಟ್‌ನ ಚೀಫ್ ಜಸ್ಟೀಸ್‌ಗೆ ದೂರು ನೀಡಿದ್ದಾರೆ. ತನಗೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದೂ ನ್ಯಾಯಾಧೀಶೆ ದೂರಿನಲ್ಲಿ ವಿನಂತಿಸಿ ದ್ದಾರೆ. ದೂರಿನ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಚೀಫ್ ಜಸ್ಟೀಸ್ ಡಿ.ವೈ. ಚಂದ್ರಚೂಡ್ ಅವರು ಅಲಹಾಬಾದ್ ಹೈಕೋರ್ಟ್ ನೊಂದಿಗೆ ವರದಿ ಆಗ್ರಹಪಟ್ಟಿದ್ದಾರೆ.
ಉತ್ತರಪ್ರದೇಶದ ಬಂಧ ಜಿಲ್ಲೆಯ ನ್ಯಾಯಾಧೀಶೆ ಚೀಫ್ ಜಸ್ಟೀಸ್‌ರಿಗೆ ದೂರು ಒಳಗೊಂಡ ಪತ್ರ ಕಳುಹಿಸಿದ್ದಾರೆ. ನ್ಯಾಯಾಧೀ ಶರು ಲೈಂಗಿಕವಾಗಿ ಕಿರುಕುಳ ನೀಡಿ ದ್ದಾರೆಂದೂ, ರಾತ್ರಿ ಹೊತ್ತಿನಲ್ಲಿ ಬಂದು ಕಾಣಬೇಕೆಂದು ತಿಳಿಸಿದ್ದಾ ರೆಂದು ನ್ಯಾಯಾಧೀಶೆ ನೀಡಿದ ಪತ್ರ ದಲ್ಲಿ ತಿಳಿಸಲಾಗಿದೆ. ಆಕ್ಷೇಪ ಹಾಗೂ ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ ವೆಂದೂ ಇದರಿಂದ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
ಭಾರೀ ನೋವು ಹಾಗೂ ನಿರಾಸೆ ಮೂಡಿಸಿದ ಪರಿಸ್ಥಿತಿಯಲ್ಲಿ ದೂರು ನೀಡುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸಾಮಾನ್ಯ ಜನರಿಗೆ ನ್ಯಾಯ ಲಭ್ಯಗೊಳಿಸಬಹದೆಂಬ ನಂಬಿಕೆಯಲ್ಲಿ ಜ್ಯುಡೀಶಿಯಲ್ ಸರ್ವೀಸ್‌ಗೆ ಸೇರಿರುವುದಾಗಿಯೂ ಆದರೆ ನ್ಯಾಯಕ್ಕಾಗಿ ಬೇಡಬೇಕಾದ ಸ್ಥಿತಿ ತನಗುಂಟಾಗಿದೆಯೆಂದೂ ಡಯಾಸ್‌ನಲ್ಲಿ ಕೆಟ್ಟ ಶಬ್ದಗಳಿಂದ ಅವಮಾನ ಎದುರಿಸಬೇಕಾಗಿ ಬಂದಿದೆಯೆಂದು ನ್ಯಾಯಾಧೀಶೆ ದೂರಿನಲ್ಲಿ ತಿಳಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ ಬಂದು ತನ್ನನ್ನು ಕಾಣಬೇಕೆಂದು ಜಿಲ್ಲಾ ನ್ಯಾಯಾಧೀಶ ತಿಳಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಈ ಬಗ್ಗೆ ೨೦೨೨ರಲ್ಲಿ ಅಲಹಾಬಾದ್ ಹೈಕೋರ್ಟ್ ಚೀಫ್ ಜಸ್ಟೀಸ್‌ಗೆ, ಅಡ್ಮಿನಿಸ್ಟ್ರೇಟಿವ್ ಜಡ್ಜ್‌ಗೆ ದೂರು ನೀಡಿರುವುದಾಗಿಯೂ ಆದರೆ ಕ್ರಮ ಉಂಟಾಗಿಲ್ಲವೆಂದು ತಿಳಿಸಲಾಗಿದೆ.