ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬೀಳ್ಕೊಡುಗೆ

ಕಾಸರಗೋಡು: ಸಿಬಿಐಯಲ್ಲಿ ಪೊಲೀಸ್ ಸೂಪರಿಂಟೆಂ ಡೆಂಟ್ ಆಗಿ ಬೆಂಗಳೂರು ಘಟಕಕ್ಕೆ ಡೆಪ್ಯುಟೇಶನ್‌ನಲ್ಲಿ ತೆರಳಿದ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪ ಡಿ. ಅವರಿಗೆ ಪೊಲೀಸ್ ಸಂಘಟನೆಗಳ ನೇತೃತ್ವದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಹೆಚ್ಚುವರಿ ಎಸ್‌ಪಿ ಪಿ. ಬಾಲಕೃಷ್ಣನ್ ನಾಯರ್ ಕಾರ್ಯಕ್ರಮ ಉದ್ಘಾಟಿಸಿದರು. ಡಿವೈಎಸ್‌ಪಿಗಳಾದ ಸಿ.ಕೆ. ಸುನಿಲ್ ಕುಮಾರ್, ಉತ್ತಮ್ ದಾಸ್ ಟಿ, ಕೆಪಿಒಎ ರಾಜ್ಯ ನಿರ್ವಾಹಕ ಸಮಿತಿ ಸದಸ್ಯ ಎಂ. ಸದಾಶಿವನ್, ಜಿಲ್ಲಾ ಉಪಾಧ್ಯಕ್ಷ ಶ್ರೀದಾಸ್ ಎಸ್.ಐ, ಎ.ಪಿ. ಸುರೇಶ್, ಬಿ. ರಾಜ್‌ಕುಮಾರ್ ಶುಭ ಕೋರಿದರು. ಕೆಪಿಎ ಜಿಲ್ಲಾ ಅಧ್ಯಕ್ಷ ಬಿ. ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದರು. ಪಿ. ರವೀಂದ್ರನ್ ಸ್ವಾಗತಿಸಿ, ಟಿ.ವಿ. ಸುಧೀಶ್ ವಂದಿಸಿದರು.

RELATED NEWS

You cannot copy contents of this page