ಜಿಲ್ಲಾ ಮೊಗೇರ ಸಂಘದಿಂದ ಪ್ರತಿಭಾ ಪುರಸ್ಕಾರ
ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮ ಜರಗಿತು. ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕಿಶನ್ರಾಜ್ ಕೆ ಕೆ, ಧನ್ಯಶ್ರೀ ಎ.ಕೆ., ಹಾಗೂ +2ವಿನಲ್ಲಿ ಅತ್ಯದಿsಕ ಅಂಕ ಗಳಿಸಿದ ಜ್ಯೋತಿಕ ಮಜೀರ್ಪಳ್ಳಕಟ್ಟೆ ಇವರನ್ನು ಅಭಿನಂದಿ ಸಲಾಯಿತು. ಬದಿಯಡ್ಕ ಪಂ. ಸದಸ್ಯ ಶಂಕರ ಡಿ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ನಿಟ್ಟೋಣಿ ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಮದರು ಮಹಾಮಾತೆ ಅಧ್ಯಕ್ಷ ವಸಂತ ಅಜಕೊಡು, ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ರಾಮ ಪಟ್ಟಾಜೆ, ಮಂಗಲ್ಪಾಡಿ ಪಂ. ಸದಸ್ಯ ಬಾಬು ಬಂದ್ಯೋಡು, ಜಿಲ್ಲಾ ಸಮಿತಿ ಗೌರವಾಧ್ಯಕ್ಷ ರಾಮಪ್ಪ ಎಂ. ಪಿ., ಜಿಲ್ಲಾ ಸಮಿತಿ ಸದಸ್ಯರಾದ ಕೃಷ್ಣದಾಸ್ ಡಿ, ರವಿ ಕೆ., ಚಂದಪ್ಪ ಕಕ್ವೆ, ಅಂಗಾರ ಅಜಕೋಡ್, ಸುಂದರ ಸುದೆಂಬಳ, ಗಂಗಾಧರ ಗೋಳಿಯಡ್ಕ, ವಿನೋದ್ ಬೇಪು, ಶೋಭಾ ಟೀಚರ್, ನಾಗವೇಣಿ ಟೀಚರ್ ಮಾತನಾಡಿದರು. ಕೃಷ್ಣ ಕಜಂಪಾಡಿ, ಆನಂದ ಕಾಟಿಪಳ್ಳ ಉಪಸ್ಥಿತರಿದ್ದರು. ಕಾರ್ಯದರ್ಶಿ ಗೋಪಾಲ ಡಿ. ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ವಂದಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ಪಂ. ಮೊಗೇರ ಸಮಿತಿ ರೂಪೀಕರಿಸಲಾಯಿತು.