ಜಿಲ್ಲಾ ಸಬ್ ಜ್ಯೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್ ನಾಯ್ಕಾಪುನಲ್ಲಿ ೨೫ರಂದು

ಕುಂಬಳೆ: ಜಿಲ್ಲಾ ಕಬಡ್ಡಿ ತಾಂತ್ರಿಕ ಸಮಿತಿ ಮತ್ತು ಜೆ.ಕೆ. ಅಕಾಡೆಮಿ, ಕಾಸರಗೋಡು ಜಂಟಿ ಯಾಗಿ ಆಯೋಜಿಸಿರುವ ೩೩ನೇ ಕಾಸರಗೋಡು ಜಿಲ್ಲಾ ಸಬ್ ಜ್ಯೂನಿಯರ್ ಕಬಡ್ಡಿ ಚಾಂಪಿ ಯನ್‌ಶಿಪ್ ಫೆಬ್ರವರಿ ೨೫ರಂದು  ಬೆಳಿಗ್ಗೆ ೯ರಿಂದ ಕುಂಬಳೆ ಸನಿಹದ ನಾಯ್ಕಾಪು ಜೆ.ಕೆ. ಅಕಾಡೆಮಿಯಲ್ಲಿ ನಡೆಯಲಿದೆ.

ಪುರುಷ ಮತ್ತು ಮಹಿಳಾ ಆಟಗಾರರ ತೂಕ ೫೫ ಕೆ.ಜಿ. ಆಗಿದ್ದು, ಪುರುಷ ಕ್ರೀಡಾಳುಗಳಿಗೆ ೨೦೨೪ರ ಮಾರ್ಚ್ ೧೯ರ ವೇಳೆಗೆ ೧೯ ವರ್ಷ ಪೂರ್ತಿಯಾಗಿ ರಬಾರದು. ಹುಡುಗಿಯರಿಗೆ ೨೦೨೪ ಎಪ್ರಿಲ್ ೩ಕ್ಕೆ ೧೬ ವರ್ಷ ಪೂರ್ತಿಯಾಗಿರಬಾರದು. ಇದೇ ಸಂದರ್ಭದಲ್ಲಿ ೨೦೨೪ರ ಮಾರ್ಚ್ ೧ ಮತ್ತು ೨ರಂದು ಕೊಲ್ಲಂನಲ್ಲಿ ನಡೆಯಲಿರುವ ರಾಜ್ಯ ಸಬ್ ಜೂನಿಯರ್ ಚಾಂಪಿಯನ್‌ಶಿಪ್‌ಗೆ ಕಾಸರಗೋಡು ಜಿಲ್ಲಾ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

You cannot copy content of this page